ಪಪುವ ನ್ಯೂಗಿನಿಯಲ್ಲಿ ಪ್ರಬಲ ಭೂಕಂಪ

Update: 2019-07-15 16:34 GMT

ಸಿಡ್ನಿ, ಜು. 15: ಪಪುವ ನ್ಯೂಗಿನಿ ಸಮುದ್ರದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಹೇಳಿದೆ.

ಭೂಕಂಪವು ನ್ಯೂಬ್ರಿಟನ್‌ನಲ್ಲಿರುವ ಕಂಡ್ರಿಯನ್‌ನಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿ 33 ಕಿ.ಮೀ. ಆಳದಲ್ಲಿ ಸಂಭವಿಸಿದೆ.

ನಾಶ ನಷ್ಟದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.

ಇಲ್ಲಿಗೆ ಸಮೀಪದ ಇಂಡೋನೇಶ್ಯದ ಮೊಲುಕಸ್ ದ್ವೀಪಗಳಲ್ಲಿ ಸೋಮವಾರ ಸರಣಿ ಪಶ್ಚಾತ್ ಕಂಪನಗಳು ಸಂಭವಿಸಿವೆ. ಅದಕ್ಕೂ ಮುನ್ನ ಅಲ್ಲಿ ನಡೆದ ಭೂಕಂಪದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ.

ನೂರಾರು ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನಗೈದಿದ್ದಾರೆ.

ನೇಪಾಳದ ಸಪ್ತಾರಿ ರಾಜ್ಯ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಪ್ರವಾಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News