ಹಫೀಝ್ ಸಯೀದ್, ಮೂವರು ಸಹಚರರಿಗೆ ನಿರೀಕ್ಷಣಾ ಜಾಮೀನು

Update: 2019-07-16 14:17 GMT

ಲಾಹೋರ್, ಜು. 16: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಜಮಾಅತುದಅವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ತನ್ನ ಧಾರ್ಮಿಕ ಶಾಲೆಗಾಗಿ ಸರಕಾರಿ ಭೂಮಿಯನ್ನು ಅಕ್ರಮವಾಗಿ ಬಳಸಿದ ಪ್ರಕರಣದಲ್ಲಿ, ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಅವನಿಗೆ ಮತ್ತು ಅವನ ಮೂವರು ಸಹಚರರಿಗೆ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದೆ.

ಲಾಹೋರ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಸಯೀದ್ ಮತ್ತು ಅವನ ಸಹಚರರಾದ ಹಫೀಝ್ ಮಸೂದ್, ಅಮೀರ್ ಹಂಝ ಮತ್ತು ಮಲಿಕ್ ಝಫರ್‌ಗೆ ಆಗಸ್ಟ್ 31ರವರೆಗೆ ಬಂಧನದಿಂದ ವಿನಾಯಿತಿ ನೀಡುವ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಅಮೆರಿಕದ ಖಜಾನೆ ಇಲಾಖೆಯು 2012ರಲ್ಲಿ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಿದೆ ಹಾಗೂ ಸಯೀದ್‌ನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಕೋಟಿ ಡಾಲರ್ (ಸುಮಾರು 69 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News