ಜು.17 ರಿಂದ 15 ನಿಲ್ದಾಣಗಳಲ್ಲಿ ವಿದ್ಯಾರ್ಥಿ ಪಾಸ್ ವಿತರಣೆ

Update: 2019-07-16 17:04 GMT

ಬೆಂಗಳೂರು, ಜು.16: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 15 ಬಸ್ ನಿಲ್ದಾಣಗಳಲ್ಲಿ 66 ಕೌಂಟರ್‌ಗಳ ಮೂಲಕ ಇಂದಿನಿಂದ(ಜು.17) ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡಲು ಮುಂದಾಗಿದೆ.

ಇಲ್ಲಿಯವರೆಗೂ ಪಾಸ್ ವಿತರಿಸಲು 20,3,314 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಅರ್ಜಿಗಳಲ್ಲಿ 1,01,977 ಪಾಸುಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 29,637 ಅರ್ಜಿಗಳನ್ನು ವಿದ್ಯಾರ್ಥಿಗಳು ಸರಿಯಾದ ಮಾಹಿತಿಯೊಂದಿಗೆ ಸಲ್ಲಿಸದೇ ತಿರಸ್ಕೃತವಾಗಿರುತ್ತವೆ. ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸುವಂತೆ ಎಸ್.ಎಂ.ಎಸ್/ಇ-ಮೇಲ್ ಮೂಲಕ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ವಿವರವಾದ ಮಾಹಿತಿಯು ಸಂಸ್ಥೆಯ ವೆಬ್‌ಸೈಟ್‌ನಲ್ಲಿ www.mybmtc.com ಲಭ್ಯವಿದ್ದು, ಮಾಹಿತಿಯನ್ನು ಪಡೆದ ನಂತರ ಅರ್ಜಿ ಸಲ್ಲಿಸಬಹುದು.

25,610 ಅರ್ಜಿಗಳು ಶಿಕ್ಷಣ ಸಂಸ್ಥೆಗಳಿಂದ ಅನುಮೋದನೆ ಆಗಬೇಕಾಗಿದ್ದು, ಸದರಿ ಅರ್ಜಿಗಳನ್ನು ಶಿಕ್ಷಣ ಸಂಸ್ಥೆಗಳಿಂದ ಅನುಮೋದಿಸುವಂತೆ ಈಗಾಗಲೇ ಇ-ಮೇಲ್ ಮೂಲಕ ಸಂಸ್ಥೆಯು ಕೋರಿದೆ. 46,090 ವಿದ್ಯಾರ್ಥಿಗಳ ಅರ್ಜಿಗಳನ್ನು ಅನುಮೋದಿಸಿದ್ದು, ಸದರಿ ವಿದ್ಯಾರ್ಥಿಗಳು ಪಾಸು ಪಡೆಯುವ ವೇಳೆ, ದಿನಾಂಕ, ಸ್ಥಳವನ್ನು ನಿಗದಿಪಡಿಸಿಕೊಂಡು ಪಾಸನ್ನು ಪಡೆಯಬಹುದು.

ಮುಂದುವರೆದು, ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ವೆಬ್‌ಸೈಟ್ www.mybmtc.com ಮೂಲಕ ನೋಂದಣಿಯಾಗದೇ ಇದ್ದಲ್ಲಿ ಹಾಗೂ ವಿದ್ಯಾರ್ಥಿ ಪಾಸ್‌ಗಾಗಿ ಇಲ್ಲಿಯವರೆಗೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಶೀಘ್ರವಾಗಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬೇಕು. ಸಂಸ್ಥೆಯ 15 ಬಸ್ ನಿಲ್ದಾಣಗಳ 66 ಕೌಂಟರ್‌ಗಳ ವಿವರಗಳು ವೆಬ್‌ಸೈಟ್‌ನಲ್ಲಿವೆ ಎಂದು ಬಿಎಂಟಿಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News