ಟ್ರಕ್ –ಕಾರು ಢಿಕ್ಕಿ; 9 ವಿದ್ಯಾರ್ಥಿಗಳ ಸಾವು

Update: 2019-07-20 05:00 GMT

ಪುಣೆ, ಜು.20: ಪುಣೆ –ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಟ್ರಕ್  ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರ್ ನಲ್ಲಿದ್ದ  9 ಮಂದಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶನಿವಾರ ಬೆಳಗ್ಗಿನ ಜಾವ ಸಂಭವಿಸಿದೆ.

ಕಡಮ್ವಾಕ್ ವಸ್ತಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿಗಳು ರಾಯ್ಘಡದಿಂದ ತಮ್ಮ  ಊರು  ಯಾವತ್ ಗೆ ಕಾರ್ ನಲ್ಲಿ ವಾಪಸಾಗುತ್ತಿದ್ದಾಗ ಅವರ ಕಾರು ಟ್ರಕ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ, ಮೃತಪಟ್ಟ ಎಲ್ಲರೂ   19ರಿಂದ 23 ವಯಸ್ಸಿನವರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News