ಆರ್ಕ್‌ಟಿಕ್ ಸಮುದ್ರದ ಮಂಜಿನ ಹೊದಿಕೆ ಕರಗುವಿಕೆ ವೇಗದಲ್ಲಿ ಏರಿಕೆ: ವಿಜ್ಞಾನಿಗಳಿಂದ ಅಧ್ಯಯನ

Update: 2019-07-20 16:07 GMT

ಓಸ್ಲೊ, ಜು. 20: ಉತ್ತರ ಧ್ರುವದ ಸುತ್ತಲಿನ ಪ್ರದೇಶಗಳಲ್ಲಿನ ಜುಲೈ ಉಷ್ಣತೆಯು ಏರಿಕೆಯಾದ ಬಳಿಕ, ಆರ್ಕ್‌ಟಿಕ್ ಸಮುದ್ರದ ಮಂಜಿನ ಹೊದಿಕೆಯು ವರ್ಷದ ಈ ಅವಧಿಯ ಎರಡನೆ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಈ ವಲಯದ ಮಂಜು ನಷ್ಟ ಪ್ರಮಾಣವು ಜಾಗತಿಕ ಹವಾಮಾನದ ಮಹತ್ವದ ಸೂಚಕವಾಗಿದೆ.

ಈ ತಿಂಗಳ ಮಂಜು ಕರಗುವಿಕೆಯು 2012ರ ಜುಲೈಯಲ್ಲಿ ದಾಖಲಾದ ದಾಖಲೆಗೆ ಸಮೀಪದಲ್ಲಿದೆ ಎಂದು ಕೊಲರಾಡೊದ ನ್ಯಾಶನಲ್ ಸ್ನೋ ಆ್ಯಂಡ್ ಐಸ್ ಡೇಟಾ ಸೆಂಟರ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆರ್ಕ್‌ಟಿಕ್ ವೃತ್ತದಲ್ಲಿನ ಈ ವರ್ಷದ ಉಷ್ಣ ಅಲೆಯು ಅಲಾಸ್ಕ, ಕೆನಡ ಮತ್ತು ಗ್ರೀನ್‌ಲ್ಯಾಂಡ್‌ನ ಪ್ರದೇಶಗಳ ಉಷ್ಣತೆಯನ್ನು ದಾಖಲೆಯ ಮಟ್ಟಕ್ಕೆ ಏರಿಸಿದೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಗಮನಿಸಲಾದ ಸರಾಸರಿ ಮಂಜು ಕರಗುವಿಕೆ ದರದಿಂದ ಹೆಚ್ಚು ವೇಗವಾಗಿ ಮಂಜು ಕರಗುತ್ತಿದೆ. ಇದರ ಪರಿಣಾಮವಾಗಿ ಪ್ರತಿ ದಿನ ಹೆಚ್ಚುವರಿಯಾಗಿ 20,000 ಚದರ ಕಿಲೋಮೀಟರ್ ವ್ಯಾಪ್ತಿಯ ಮಂಜು ಕರಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News