ಸೌದಿಯಲ್ಲಿ ಅಮೆರಿಕ ಸೈನಿಕರ ನಿಯೋಜನೆಗೆ ದೊರೆ ಸಲ್ಮಾನ್ ಒಪ್ಪಿಗೆ

Update: 2019-07-21 06:32 GMT

ರಿಯಾದ್, ಜು. 20: ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಾತರಿಪಡಿಸುವುದಕ್ಕಾಗಿ ಸೌದಿ ಅರೇಬಿಯದಲ್ಲಿ ಅಮೆರಿಕದ ಸೈನಿಕರನ್ನು ಇರಿಸುವುದಕ್ಕೆ ದೊರೆ ಸಲ್ಮಾನ್ ಅಂಗೀಕಾರ ನೀಡಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ಶುಕ್ರವಾರ ವರದಿ ಮಾಡಿದೆ.

ಕೊಲ್ಲಿಯಲ್ಲಿ ಇರಾನ್ ಮತ್ತು ಅಮೆರಿಕಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ರಕ್ಷಣೆ ಹಾಗೂ ಶಾಂತಿ ಪಾಲನೆಯಲ್ಲಿನ ಜಂಟಿ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯ ದೊರೆ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಸ್‌ಪಿಎ ವರದಿ ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯವನ್ನು ಮಹತ್ವದ ಭಾಗೀದಾರ ಎಂಬುದಾಗಿ ಪರಿಗಣಿಸುವುದಾಗಿ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News