ಇಟಲಿ: ಯುರೋಪ್‌ನ ಅತಿ ದೊಡ್ಡ ಜ್ವಾಲಾಮುಖಿ ಸ್ಫೋಟ

Update: 2019-07-20 17:00 GMT

ರೋಮ್ (ಇಟಲಿ), ಜು. 20: ಯುರೋಪ್‌ನ ಅತಿ ದೊಡ್ಡ ಜ್ವಾಲಾಮುಖಿ ಮೌಂಟ್ ಎಟ್ನ ಶುಕ್ರವಾರ ರಾತ್ರಿ ಸ್ಫೋಟಿಸಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಪರ್ವತದಿಂದ ಬೂದಿಯ ದಟ್ಟ ಪ್ರವಾಹವು ಆಕಾಶಕ್ಕೆ ಚಿಮ್ಮುತ್ತಿದೆ. ಹಾಗಾಗಿ, ಸಿಸಿಲಿಯ ಎರಡನೇ ಅತಿ ದೊಡ್ಡ ನಗರ ಕ್ಯಾಟಾನಿಯದ ಎರಡು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಆದಾಗ್ಯೂ, ಶನಿವಾರ ಬೆಳಗ್ಗೆ ಅವುಗಳು ಆಂಶಿಕವಾಗಿ ತೆರೆದವು.

ಕಳೆದ ವರ್ಷದ ಡಿಸೆಂಬರ್‌ನಲ್ಲೂ ಈ ಜ್ವಾಲಾಮುಖಿ ಸ್ಫೋಟಿಸಿತ್ತು.

ಶನಿವಾರ ಮುಂಜಾನೆ 3 ಗಂಟೆಗೆ ಯುರೋಪ್‌ನ ಅತಿ ಎತ್ತರದ ಹಾಗೂ ಅತ್ಯಂತ ಸಕ್ರಿಯ ಜ್ವಾಲಾಮುಖಿ ಜೀವ ಪಡೆಯಿತು.

ಲಾವಾರಸವು ನಿರ್ಜನ ಪ್ರದೇಶದಲ್ಲಿ ಸುಮಾರು 1.5 ಕಿ.ಮೀ. ದೂರ ಹರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News