ರಶ್ಯ: ನ್ಯಾಯೋಚಿತ ಚುನಾವಣೆಗೆ ಆಗ್ರಹಿಸಿ ಬೃಹತ್ ಧರಣಿ

Update: 2019-07-20 17:07 GMT

ಮಾಸ್ಕೋ, ಜು. 20: ಸ್ಥಳೀಯ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯೋಚಿತವಾಗಿ ನಡೆಸುವಂತೆ ಒತ್ತಾಯಿಸಿ ರಶ್ಯ ರಾಜಧಾನಿ ಮಾಸ್ಕೋದಲ್ಲಿ ಶನಿವಾರ ನಡೆದ ಬೃಹತ್ ಧರಣಿಯಲ್ಲಿ 10,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ ಎಂದು ಸರಕಾರೇತರ ಸಂಘಟನೆ ‘ವೈಟ್ ಕೌಂಟರ್’ ತಿಳಿಸಿದೆ.

ಧರಣಿಯಲ್ಲಿ ಪ್ರತಿಪಕ್ಷಗಳ ಪ್ರಮುಖ ನಾಯಕರೂ ಪಾಲ್ಗೊಂಡರು ಎಂದು ಅದು ಹೇಳಿದೆ.

ಮಾಸ್ಕೋ ನಗರಸಭೆಗೆ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಮತ್ತು ಇತರ ಸರಕಾರಿ ವಿರೋಧಿ ಟೀಕಾಕಾರರ ಬೆಂಬಲಿಗರಿಗೆ ಅಧಿಕಾರಿಗಳು ಅವಕಾಶ ನಿರಾಕರಿಸಿರುವುದನ್ನು ಪ್ರತಿಭಟಿಸಿ ಪ್ರತಿಪಕ್ಷ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದಾರೆ ಎಂದು ವೈಟ್ ಕೌಂಟರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News