ಮುಂಬಾ ಶುಭಾರಂಭ

Update: 2019-07-20 18:00 GMT

ಹೈದರಾಬಾದ್, ಜು.20: ಅಭಿಷೇಕ್ ಸಿಂಗ್(10 ಅಂಕ)ಸಾಹಸದಿಂದ ಯು ಮುಂಬಾ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು 31-25 ಅಂಕಗಳ ಅಂತರದಿಂದ ಮಣಿಸಿತು. ಶನಿವಾರ ಇಲ್ಲಿನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಮುಂಬಾ ಪರ ರೋಹಿತ್ ಬಲಿಯಾನ್, ಸಂದೀಪ್ ನರ್ವಾಲ್ ಹಾಗೂ ಫಝಲ್ ಅಟ್ರಚಲಿ ತಲಾ 4 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಪರಾಜಿತ ತೆಲುಗು ತಂಡದ ಪರ ರಜನೀಶ್ ದಲಾಲ್ 8 ಅಂಕ ಗಳಿಸಿದರೆ, ಸಿದ್ದಾರ್ಥ್ ದೇಸಾಯಿ(5) ಹಾಗೂ ರಾಕೇಶ್ ಗೌಡ(4)ಒಂದಷ್ಟು ಹೋರಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News