ಬೆಂಗಳೂರು ಬುಲ್ಸ್ ಗೆ ರೋಚಕ ಜಯ

Update: 2019-07-20 18:42 GMT

 ಹೈದರಾಬಾದ್, ಜು.20: ಏಳನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಟೂರ್ನಮೆಂಟ್‌ನ ಎರಡನೇ ಪಂದ್ಯದಲ್ಲಿ ಇಂದು ಪಾಟ್ನಾ ಪೈರೇಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಬೆಂಗಳೂರು 34-32 ಅಂತರದಲ್ಲಿ ರೋಚಕ ಜಯ ಸಾಧಿಸಿದೆ.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪವನ್ ಕುಮಾರ್ 9 ಅಂಕ , ಅಮಿತ್ ಶೆಯೋರಾನ್ 5 ಅಂಕ , ಸುಮಿತ್ ಸಿಂಗ್, ಆಶೀಷ್ ಕುಮಾರ್, ಮಹೇಂದರ್ ಸಿಂಗ್, ರೋಹಿತ್ ಕುಮಾರ್ ತಲಾ 4 ಅಂಕ ಮತ್ತು ಬಾಂಟಿ 2 ಅಂಕಗಳನ್ನು ಕಲೆಹಾಕಿ ಬೆಂಗಳೂರು ತಂಡಕ್ಕೆ ಗೆಲುವು ತಂದು ಕೊಟ್ಟರು.

ಪಾಟ್ನಾ ಪೈರೇಟ್ಸ್ ತಂಡದ ನಾಯಕ ಪ್ರದೀಪ್ ನರ್ವಾಲ್ 10 ಅಂಕ, ಮುಹಮ್ಮದ್ ಇಸ್ಮಾಯೀಲ್ 9 ಅಂಕ, ವಿಕಾಸ್ ಜಾಗ್ಲಾನ್ 4, ಹಾದಿಓಶೋಟರ್ಕ್ 3, ನೀರಜ್ ಕುಮಾರ್ 3 , ಲೀ ಜಾಂಗ್ ಕುನ್ ಮತ್ತು ಜೈದೀಪ್ ತಲಾ 1 ಅಂಕಗಳನ್ನು ಸೇರಿಸಿ ಹೋರಾಟ ನಡೆಸಿದರೂ ಅವರ ಪ್ರಯತ್ನ ಫಲ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News