ಬಿಹಾರದಲ್ಲಿ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 97ಕ್ಕೆ ಏರಿಕೆ

Update: 2019-07-21 05:39 GMT

ಪಾಟ್ನಾ, ಜು.21: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು,  ಪ್ರವಾಹದಿಂದಾಗಿ  ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿದೆ. ಇನ್ನೂ 6 ನದಿಗಳಲ್ಲಿ ಪ್ರವಾಹ ಕಡಿಮೆಯಾಗಿಲ್ಲ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಸೀತಾಮರ್ಹಿಯಲ್ಲಿ 25 ಮಂದಿ ಬಲಿಯಾಗಿದ್ದಾರೆ.   ಮಧುಬನಿ 18,  ಅರಾರಿಯಾ 12,  ಶಿಯೋಹರ್  ಮತ್ತು  ದರ್ಭಂಗದಲ್ಲಿ ತಲಾ 10 ಮಂದಿ,  ಪುರಿಯಾ 9,  ಕೃಷ್ಣಗಂಜ್ 5, ಸುಪಾಲ್ 3, ಪೂರ್ವ ಚಂಪಾರನ್ 2 ಮತ್ತು  ಸಹರ್ಸಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ವಿಪತ್ತು ನಿರ್ವಹಣಾ ಇಲಾಖೆ(ಡಿಎಂಡಿ)  ದೃಢಪಡಿಸಿದೆ.

ಪ್ರವಾಹದಿಂದ 69, 27, 350 ಮಂದಿ  ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹಪೀಡಿತ ಮುಜಾಫರ್ಪುರ್ ಮತ್ತು    ಸೀತಾಮರ್ಹಿ ನಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಜುಲೈ 25ರ ತನಕ ಮುಚ್ಚಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News