ಉತ್ತಮ ಪ್ರದರ್ಶನ ಮುಂದುವರಿಸಿದ ಭಾರತ

Update: 2019-07-23 18:34 GMT

ಬ್ಯಾಂಕಾಕ್, ಜು.23: ಥಾಯ್ಲೆಂಡ್ ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿರುವ ಭಾಗ್ಯಬತಿ ಕಚಾರಿ(75ಕೆಜಿ)ಕನಿಷ್ಠ ಪಕ್ಷ ಕಂಚಿನ ಪದಕವನ್ನು ದೃಢಪಡಿಸಿದ್ದಾರೆ.

ಈ ವರ್ಷಾರಂಭದಲ್ಲಿ ಇಂಡಿಯಾ ಓಪನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾಗ್ಯಬತಿ ವಿಯೆಟ್ನಾಂನ ಗುಯೆನ್ ಹುಯೊಂಗ್‌ರನ್ನು 5-0 ಅಂತರದಿಂದ ಸೋಲಿಸಿ ಪದಕ ಸುತ್ತಿಗೆ ತೇರ್ಗಡೆಯಾದರು. ಪುರುಷರ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಕ್ರೊಯೇಶಿಯದ ಪೀಟರ್ ಸೆಟಿನಿಕ್‌ರನ್ನು 5-0 ಅಂತರದಿಂದ ಮಣಿಸಿದ ಆಶೀಶ್ ಕುಮಾರ್(69ಕೆಜಿ)ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ದಿನದ ಕೊನೆಯ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಮುಹಮ್ಮದ್ ಹಸಮುದ್ದೀನ್(56ಕೆಜಿ)ಬೊಸ್ವಾನದ ಜಾರ್ಜ್ ಮೊಲ್ವಾಂಟ್ವಾರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಸೋಮವಾರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ದೀಪಕ್ ಸಿಂಗ್(49ಕೆಜಿ) ಹಾಗೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್(51ಕೆಜಿ)ಸಹಿತ ಭಾರತದ ಏಳು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಇತರ ನಾಲ್ವರು ಬಾಕ್ಸರ್‌ಗಳಾದ ಮನೀಶ್ ವೌನ್(57ಕೆಜಿ), ಆಶೀಶ್ ಕುಮಾರ್(75ಕೆಜಿ), ಮಂಜು ರಾಣಿ(48ಕೆಜಿ) ಹಾಗೂ ಬ್ರಿಜೇಶ್ ಯಾದವ್(81ಕೆಜಿ)ಕ್ವಾ.ಫೈನಲ್‌ಗೆ ತಲುಪಿದಾದ್ರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News