ಮ್ಯಾಂಚೆಸ್ಟರ್ ಏರ್‌ಪೋರ್ಟ್‌ನಲ್ಲಿ ವಸೀಂ ಅಕ್ರಂಗೆ ಅವಮಾನ

Update: 2019-07-24 14:09 GMT

ಹೊಸದಿಲ್ಲಿ, ಜು.23: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಸೀಂ ಅಕ್ರಂ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ ಬ್ಯಾಗ್ ಸಾಗಿಸುತ್ತಿದ್ದಾಗ ಮುಜುಗರದ ಹಾಗೂ ಅವಹೇಳನಕಾರಿ ಸನ್ನಿವೇಶವನ್ನು ಎದುರಿಸಿದ್ದಾರೆ.

1992ರ ವಿಶ್ವಕಪ್ ವಿಜೇತ ಸದಸ್ಯರಾಗಿರುವ ಅಕ್ರಂ ಮಂಗಳವಾರ ಈ ಕುರಿತು ಟ್ವೀಟ್ ಮಾಡಿದ್ದು, ನನ್ನ ಬಳಿ ವಿಮಾನ ನಿಲ್ದಾಣದ ಅಧಿಕಾರಿಗಳು ಅಸಭ್ಯವಾಗಿ ಪ್ರಶ್ನೆ ಮಾಡಿದ್ದಲ್ಲದೆ, ಇನ್ಸುಲಿನ್ ಪೆಟ್ಟಿಗೆ ಇರುವ ಬ್ಯಾಗನ್ನು ಹೊರತೆಗೆಯುವಂತೆ ಆದೇಶಿಸಿ ಪ್ಲಾಸ್ಟಿಕ್ ಬ್ಯಾಗ್‌ನೊಳಗೆ ಹಾಕಿದ್ದಾರೆ. ನಾನು ಇನ್ಸುಲಿನ್ ಜೊತೆಗೆ ವಿಶ್ವದಾದ್ಯಂತ ಓಡಾಡುತ್ತಿರುತ್ತೇನೆ. ಈ ರೀತಿಯ ಮುಜುಗರದ ಸನ್ನಿವೇಶ ಎದುರಿಸಿರಲಿಲ್ಲ ಎಂದು ಅಕ್ರಂ ಟ್ವೀಟ್ ಮಾಡಿದ್ದಾರೆ.

ಮಾಜಿ ಎಡಗೈ ವೇಗದ ಬೌಲರ್ ಅಕ್ರಂ ಪಾಕಿಸ್ತಾನವನ್ನು 104 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 414 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 356 ಏಕದಿನ ಪಂದ್ಯಗಳನ್ನಾಡಿರುವ ಅವರು ಒಟ್ಟು 502 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 53ರ ಹರೆಯದ ಅಕ್ರಂ ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್‌ಕಪ್‌ನ ವೀಕ್ಷಕವಿವರಣೆಯ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News