ಅಲ್ ಮದೀನ ಜುಬೈಲ್ ಕಮಿಟಿ ವಾರ್ಷಿಕ ಮಹಾಸಭೆ

Update: 2019-07-24 11:49 GMT
ಅಬ್ದುಲ್ ರಶೀದ್, ಉಸ್ಮಾನ್ ಮಲಾರ್, ಹೈಝಂ ಪೆರ್ನೆ

ಜುಬೈಲ್: ಅಲ್ ಮದೀನ ಜುಬೈಲ್ ಕಮಿಟಿಯ ವಾರ್ಷಿಕ ಮಹಾಸಭೆಯು ಕೆಸಿಎಫ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜುಬೈಲ್ ಕಮಿಟಿಯ ಅಧ್ಯಕ್ಷ ಮೂಸಾ ಹಾಜಿ ವಹಿಸಿದ್ದರು, ಅಬ್ದುಲ್ ಅಝೀಝ್ ಸಅದಿ ಉದ್ಘಾಟಿಸಿದರು. ಕೆಎಂಕೆ ಅಬೂಬಕ್ಕರ್ ಮದನಿ ಹೊಸಂಗಡಿ ದುಆ ಮಾಡಿದರು. ಇಬ್ರಾಹಿಂ ಪಡಿಕಲ್ ಸ್ವಾಗತಿಸಿ, ಹೈದರ್ ನಹೀಮಿ ಕಿರಾಅತ್ ಪಠಿಸಿದರು.

2017 ರಿಂದ 2019ರ ತನಕದ ವರದಿಯನ್ನು ಅಬ್ದುಲ್ ರಶೀದ್ ವಾಚಿಸಿ, ಲೆಕ್ಕಪತ್ರವನ್ನು ಹೈಝಂ ಪೆರ್ನೆ ಮಂಡಿಸಿದರು. ಅಲ್ ಮದೀನ ಸೌದಿ ರಾಷ್ಟ್ರೀಯ ಅಧ್ಯಕ್ಷ ಎನ್ಎಸ್ ಅಬ್ದುಲ್ಲಾ ಮುಖ್ಯ ಪ್ರಭಾಷಣ ಮಾಡಿದರು. ಚುನಾವಣೆ ಅಧಿಕಾರಿ ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಎಂಜಿ ಇಕ್ಬಾಲ್ ಮಲ್ಲೂರು ನೂತನ ಸಮಿತಿ ರಚಿಸಿದರು.

ಗೌರವಾಧ್ಯಕ್ಷರಾಗಿ ಮೂಸಾ ಹಾಜಿ ಪೂಡಲ್, ಅಧ್ಯಕ್ಷರಾಗಿ ಅಬ್ದುಲ್ ರಶೀದ್ ವಳವೂರು, ಉಪಾಧ್ಯಕ್ಷರಾಗಿ  ಕೆಎಂಕೆ ಅಬೂಬಕ್ಕರ್ ಮದನಿ ಹೊಸಂಗಡಿ ಹಾಗೂ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮಲಾರ್, ಜೂತೆ ಕಾರ್ಯದರ್ಶಿಯಾಗಿ ಖಲೀಲ್ ಜೊಕಟ್ಟೆ ಹಾಗೂ ಸಮದ್ ಬಾರ್ಕೊ, ಸಂಘಟನೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಡಿಕ್ಕಲ್, ಕೋಶಾಧಿಕಾರಿಯಾಗಿ ಮುಹಮ್ಮದ್ ಹೈಝಂ ಪೆರ್ಣೆ ಹಾಗೂ 25 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

ಉಸ್ಮಾನ್  ಮಲಾರ್ ವಂದಿಸಿ, ಅನ್ವರ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವರದಿ: ಇಕ್ಬಾಲ್ ಮಲ್ಲೂರು

contributor

Editor - ವರದಿ: ಇಕ್ಬಾಲ್ ಮಲ್ಲೂರು

contributor

Similar News