ಪ್ರೊ ಕಬಡ್ಡಿ: ದಿಲ್ಲಿಗೆ 1 ಅಂಕದ ಗೆಲುವು

Update: 2019-07-26 04:52 GMT

ಹೈದರಾಬಾದ್, ಜು.25: ದಬಾಂಗ್ ದಿಲ್ಲಿ ತಂಡ ಗುರುವಾರ ನಡೆದ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 9ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 30-29 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.

ಇಲ್ಲಿನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯಶಾಲಿಯಾಗಿರುವ ದಿಲ್ಲಿ ತಂಡದ ಪರ ನವೀನ್ ಕುಮಾರ್ 8 ಅಂಕ ಗಳಿಸಿದರೆ, ಮಿರಾಜ್ ಶೇಖ್(6) ಹಾಗೂ ಜೋಗಿಂದರ್ ಸಿಂಗ್(4) ಒಟ್ಟು 10 ಅಂಕ ಕಲೆ ಹಾಕಿದರು. ತಮಿಳ್ ತಲೈವಾಸ್ ಪರ ರಾಹುಲ್ ಚೌಧರಿ 7 ಅಂಕ ಗಳಿಸಿದರು. ಮಂಜೀತ್ ಚಿಲ್ಲರ್ ಹಾಗೂ ಅಜಯ್ ಠಾಕೂರ್ ತಲಾ 5 ಅಂಕ ಗಳಿಸಿದರು.

 ವೀರೋಚಿತ ಸೋಲುಂಡಿರುವ ತಮಿಳ್ ತಲೈವಾಸ್ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿ ಶುಭಾರಂಭ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News