ಕೊಹ್ಲಿ-ರೋಹಿತ್ ಭಿನ್ನಾಭಿಪ್ರಾಯ ವರದಿ ತಳ್ಳಿಹಾಕಿದ ವಿನೋದ್ ರಾಯ್

Update: 2019-07-27 05:01 GMT

ಹೊಸದಿಲ್ಲಿ, ಜು.26: ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಯನ್ನು ಆಡಳಿತಾಧಿಕಾರಿ ಸಮಿತಿ(ಸಿಒಎ)ಮುಖ್ಯಸ್ಥ ವಿನೋದ್ ರಾಯ್ ಶುಕ್ರವಾರ ನಿರಾಕರಿಸಿದ್ದಾರೆ. ಇಂತಹ ಕಥೆಯನ್ನು ಮಾಧ್ಯಮಗಳೇ ಸೃಷ್ಟಿಸಿವೆ ಎಂದು ದೂರಿದ್ದಾರೆ.

ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಸೋಲುಂಡ ಬಳಿಕ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಧ್ಯೆ ಶೀತಲ ಸಮರ ಆರಂಭವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಸಿಸಿಐ ನಾಯಕತ್ವವನ್ನು ಹಂಚಲು ಬಯಸಿದ್ದು, ರೋಹಿತ್‌ರನ್ನು ಸೀಮಿತ ಓವರ್ ಕ್ರಿಕೆಟ್ ನಾಯಕನಾಗಿಯೂ ಹಾಗೂ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್ ನಾಯಕನಾಗಿ ನೇಮಿಸಲು ಯೋಚಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಬಿಸಿಸಿಐ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

 ಭಾರತದ ಇಬ್ಬರು ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳಲ್ಲಿ ಭಿನ್ನಾಭಿಪ್ರಾಯ ಮೂಡಿರುವ ವರದಿಯ ಬಗ್ಗೆ ಸುದ್ದಿಗಾರರು ರಾಯ್ ಗಮನ ಸೆಳೆದಾಗ, ಱಱ ಈ ಎಲ್ಲಾ ಕಥೆಯನ್ನು ನೀವೇ ಸೃಷ್ಟಿಸಿದ್ದೀರಿೞೞಎಂದು ಉತ್ತರಿಸಿದರು.

ತಮ್ಮಳಗೆ ಯಾವ ಕಾರಣಕ್ಕೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗೆ ಕೊಹ್ಲಿ ಅಥವಾ ರೋಹಿತ್ ಶರ್ಮಾ ಈತನಕ ಪ್ರತಿಕ್ರಿಯೆ ನೀಡಿಲ್ಲ. ರೋಹಿತ್ ವಿಶ್ವಕಪ್‌ನಲ್ಲಿ ಒಟ್ಟು 5 ಶತಕಗಳ ಸಹಿತ ಗರಿಷ್ಠ ರನ್ ಕಲೆ ಹಾಕಿದ್ದರು. ಕೊಹ್ಲಿ ಇಂಗ್ಲೆಂಡ್‌ನಲ್ಲಿ ಐದು ಅರ್ಧಶತಗಳನ್ನು ಸಿಡಿಸಿ ಸಾಧಾರಣ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News