ಇಂಡಿಯನ್ ಬಾಕ್ಸಿಂಗ್ ಲೀಗ್‌ನಲ್ಲಿ ಮೇರಿಕೋಮ್, ಅಮಿತ್

Update: 2019-07-27 05:07 GMT

ಹೊಸದಿಲ್ಲಿ, ಜು.26: ಮೊದಲ ಆವೃತ್ತಿಯ ಇಂಡಿಯನ್ ಬಾಕ್ಸಿಂಗ್ ಲೀಗ್ ಅಕ್ಟೋಬರ್ 20ರಿಂದ ನವೆಂಬರ್ 9ರ ತನಕ ನಡೆಯಲಿದ್ದು, ಬಾಕ್ಸಿಂಗ್ ದಂತಕತೆ ಎಂಸಿ ಮೇರಿಕೋಮ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್ ಸಹಿತ ಹಲವು ಸ್ಟಾರ್ ಬಾಕ್ಸರ್‌ಗಳು ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

ಲೀಗ್‌ನ ಆಯೋಜಕ ಸ್ಪೋರ್ಟ್ಸ್‌ಲೈವ್ ಮೊದಲ ಮೂರು ಆವೃತ್ತಿಯ ಲೀಗ್‌ಗೆ ಪ್ರತ್ಯೇಕ ಟೆಂಡರ್ ಪ್ರಕ್ರಿಯೆ ನಡೆಸಿ ಡಿಜಿಟಲ್ ಹಕ್ಕನ್ನು ಮಾರಾಟ ಮಾಡಲಿದೆ.

  ಮೂರು ಸ್ಥಳಗಳಲ್ಲಿ 18 ದಿನಗಳ ಕಾಲ ನಡೆಯುವ ತಲಾ ಮೂರು ಸುತ್ತಿನ ಪಂದ್ಯಗಳಲ್ಲಿ ಒಟ್ಟು 90 ಬಾಕ್ಸಿಂಗ್ ಸ್ಪರ್ಧೆಗಳಿರುತ್ತವೆ. 5 ಬಾಕ್ಸಿಂಗ್ ಸ್ಪರ್ಧೆಗಳು ಎರಡು ತಂಡಗಳ ಮಧ್ಯೆೆ ಪ್ರತಿದಿನ ವಿವಿಧ ತೂಕ ವಿಭಾಗಗಳಲ್ಲಿ ನಡೆಯಲಿದೆ. ಪ್ರಮುಖ ಬಾಕ್ಸರ್‌ಗಳಾದ ಮೇರಿ ಕೋಮ್, ಅಮಿತ್ ಪಾಂಘಾಲ್, ಗೌರವ್ ಬಿಧುರಿ ಹಾಗೂ ಸೋನಿಯಾ ಲಾಥರ್ ಸಹಿತ 50 ಪ್ರಮುಖ ಅಂತರ್‌ರಾಷ್ಟ್ರೀಯ ಬಾಕ್ಸರ್‌ಗಳು ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಲೀಗ್ ಭಾರತದಲ್ಲಿ ಬಾಕ್ಸಿಂಗ್‌ನ್ನು ಒಂದು ಜನಪ್ರಿಯ ಕ್ರೀಡೆಯನ್ನಾಗಿ ಮಾಡಲಿದೆ ಎಂದು ಭಾರತದ ಬಾಕ್ಸಿಂಗ್ ಒಕ್ಕೂಟ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News