ವಿಶ್ವಾಸಮತಕ್ಕಿಂತ ಮೊದಲು 14 ರೆಬೆಲ್ ಶಾಸಕರ ಅಮಾನತು: ಬಿಜೆಪಿಗೆ ಲಾಭ

Update: 2019-07-28 09:28 GMT

ಬೆಂಗಳೂರು,ಜು.28: ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕಾಂಗ್ರೆಸ್‌ನ 11 ಮಂದಿ ಶಾಸಕರು ಹಾಗೂ ಜೆಡಿಎಸ್‌ನ ಮೂವರು ಶಾಸಕರುಗಳನ್ನು ಕರ್ನಾಟಕದ ಸ್ಪೀಕರ್ ರಮೇಶ್ ಕುಮಾರ್ ರವಿವಾರ ಅನರ್ಹಗೊಳಿಸಿದ್ದಾರೆ. ಈ ಬೆಳವಣಿಗೆಯು ಹೊಸ ಸರಕಾರ ರಚನೆಗೆ ಸಜ್ಜಾಗಿರುವ ಬಿಜೆಪಿ ಸರಕಾರಕ್ಕೆ ಸೋಮವಾರ ವಿಧಾನಸಭೆಯಲ್ಲಿ ತನ್ನ ವಿಶ್ವಾಸಮತ ಸಾಬೀತಿಗೆ ನೆರವಾಗಲಿದೆ.

ಗುರುವಾರ ಮೂರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಇಂದು 14 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಮೂಲಕ ಒಟ್ಟು 17 ಶಾಸಕರು ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಸದಸ್ಯ ಬಲ 208ಕ್ಕೆ ಕುಸಿದಿದೆ. ಬಹುಮತಕ್ಕೆ 105 ಶಾಸಕರ ಅವಶ್ಯಕತೆಯಿದೆ. ಬಿಜೆಪಿ ಪ್ರಸ್ತುತ 105 ಶಾಸಕರ ಬಲ ಹೊಂದಿದೆ. ಪಕ್ಷೇತರ ಶಾಸಕ ನಾಗೇಶ್ ಬೆಂಬಲ ನೀಡಿದರೆ ಬಿಜೆಪಿ ಬಲ 106ಕ್ಕೇರಲಿದೆ.

ಮೈತ್ರಿಕೂಟ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು, ಸ್ಪೀಕರ್ ರಮೇಶ್‌ಕುಮಾರ್ ಹಾಗೂ ಬಿಎಸ್ಪಿ ಶಾಸಕ ಮಹೇಶ್ ಬೆಂಬಲ ನೀಡಿದರೆ 101 ಸಂಖ್ಯೆ ತಲುಪಲಿದೆ. ಮಹೇಶ್ ಅವರು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿದ ಸಂದರ್ಭದಲ್ಲಿ ತಟಸ್ಥರಾಗಿದ್ದರು.

ಕಾಂಗ್ರೆಸ್‌ನ 13 ,ಜೆಡಿಎಸ್‌ನ 3 ಹಾಗೂ ಇಬ್ಬರು ಪಕ್ಷೇತರರು ರಾಜೀನಾಮೆ ನೀಡುವ ಮೂಲಕ ಕುಮಾರಸ್ವಾಮಿ ಸರಕಾರಕ್ಕೆ ಕುತ್ತು ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News