ಐಎಂಎ ವಂಚನೆ ಪ್ರಕರಣ: ಝಮೀರ್ ಅಹ್ಮದ್ ವಿಚಾರಣೆ ನಡೆಸಿದ ಸಿಟ್

Update: 2019-07-31 16:45 GMT

ಬೆಂಗಳೂರು, ಜು.31: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಸಿಟ್ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.

ಬುಧವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾದ ಝಮೀರ್ ಅಹ್ಮದ್ ಅವರ ಹೇಳಿಕೆಗಳನ್ನು ಸಿಟ್ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವದ ತಂಡ, ದಾಖಲು ಮಾಡಿಕೊಂಡಿದೆ.

ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಅವರ ಉದ್ಯಮದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಬಿಎಂಪಿ ನಾಮನಿರ್ದೇಶನ ಸದಸ್ಯ ಮುಜಾಹಿದ್, ಮನ್ಸೂರ್ ನನ್ನು ಪರಿಚಯಿಸಿದ್ದ. ಬಳಿಕ, ಕಾನೂನು ನಿಯಮಗಳಂತೆ ನನ್ನ ನಿವೇಶನವನ್ನು ಐಎಂಎ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಸಿಟ್ ಗೆ ಝಮೀರ್
ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಸರಿಯಿಲ್ಲ ಎಂದ ಬೇಗ್..!

ಮಾಜಿ ಸಚಿವ ರೋಶನ್ ಬೇಗ್ ಸಹ ಬುಧವಾರ ಸಿಟ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆರೋಗ್ಯ ಸರಿಯಿಲ್ಲದ ಕಾರಣ ಕಾಲಾವಕಾಶ ಬೇಕಾಗಿದೆ ಎಂದು ಸಿಟ್ ಬಳಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸಿಟ್, ರೋಷನ್ ಬೇಗ್ ಅವರಿಗೆ ಈಗಾಗಲೇ 4 ಬಾರಿ ನೋಟಿಸ್ ನೀಡಿದ್ದು ಕೇವಲ ಒಂದು ಬಾರಿ ಮಾತ್ರ ಬೇಗ್ ವಿಚಾರಣೆಗೆ ಹಾಜರಾಗಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಬೇಗ್ ಮತ್ತೆ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ರೋಷನ್ ಬೇಗ್ ಗೆ ಕಾಲಾವಕಾಶ ಕೊಡುವ ಬಗ್ಗೆ ಎಸ್ಐಟಿ ಇನ್ನೂ ಸಹ ತೀರ್ಮಾನ ಮಾಡಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News