ಎಲ್‌ಐಸಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2019-08-02 16:32 GMT

ಬೆಂಗಳೂರು, ಆ.2: ಜೀವ ವಿಮಾ ನಿಗಮ ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಪ್ರಸ್ತಾವ ವಿರೋಧಿಸಿ ಕನಕಪುರದಲ್ಲಿ ಎಲ್ಐಸಿ ಶಾಖೆ ನೌಕರರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಮಾ ನೌಕರ ಗೋಪಾಲಕೃಷ್ಣ ಮಾತನಾಡಿ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿದರು.

ಎಲ್ಐಸಿ ಸಂಸ್ಥೆ ವಿಶ್ವದಲ್ಲೇ ಅಗ್ರಮಾನ್ಯ ಸಂಸ್ಥೆಯಾಗಿದೆ. 30 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿ ವಿಶ್ವಾಸ ಗಳಿಸಿರುವಂತ ದೊಡ್ಡ ಸಂಸ್ಥೆಯಾಗಿದೆ. ಅಲ್ಲದೆ, ದೇಶದ ಆರ್ಥಿಕ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಆದರೆ, ಕೇಂದ್ರ ಸರಕಾರ ಎಲ್‌ಐಸಿಯನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ದೇಶದ ಬೆಳವಣಿಗೆಗೆೆ ಮಾರಕವಾಗಲಿದೆ ಕುಂಠಿತವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಎಲ್‌ಐಸಿ ನೌಕರರಾದ ಚಂದ್ರು, ಮಹದೇವರಾವ್, ನರಸಿಂಹಮೂರ್ತಿ ಮಾತನಾಡಿ, ಕೇಂದ್ರ ಸರಕಾರದ ಖಾಸತಿ ನೀತಿಯನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News