ಎಲ್ಲಿಸ್ ಪೆರ್ರಿ ನಂ.1 ಆಲ್‌ರೌಂಡರ್

Update: 2019-08-02 18:58 GMT

ದುಬೈ, ಆ.2: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಐಸಿಸಿ ಮಹಿಳಾ ಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಆಲ್‌ರೌಂಡರ್ ಅಗಿ ಹೊರಹೊಮ್ಮಿದ್ದಾರೆ.

ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಔಟಾಗದೆ 60 ರನ್ ಸಹಿತ ಪೆರ್ರಿ ಸರಣಿಯಲ್ಲಿ ಒಟ್ಟು 114 ರನ್ ಹಾಗೂ ಒಟ್ಟು 3 ವಿಕೆಟ್‌ಗಳನ್ನು ಪಡೆದಿದ್ದಾರೆ. ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಸ್ಟಫಾನಿ ಟೇಲರ್‌ರನ್ನು ಹಿಂದಿಕ್ಕಿದ್ದಾರೆ. ಪೆರ್ರಿ ಇದೀಗ ಟೇಲರ್‌ಗಿಂತ 12 ಅಂಕ ಮುಂದಿದ್ದಾರೆ.

ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನ್ನಿಂಗ್ ಮೊದಲ ಪಂದ್ಯದಲ್ಲಿ ಔಟಾಗದೆ 133 ರನ್ ಸಹಿತ ಸರಣಿಯಲ್ಲಿ 178 ರನ್ ಗಳಿಸಿದ್ದು, ಎರಡು ಸ್ಥಾನ ಭಡ್ತಿ ಪಡೆದು ಬ್ಯಾಟ್‌ವುಮೆನ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ನ್ಯೂಝಿಲ್ಯಾಂಡ್‌ನ ಸುಝಿ ಬೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News