ಅರ್ಜೆಂಟೀನ ತಂಡದಿಂದ ಮೆಸ್ಸಿ ಮೂರು ತಿಂಗಳು ಅಮಾನತು

Update: 2019-08-03 08:24 GMT

ಬ್ಯುನಸ್‌ಐರಿಸ್, ಆ.3: ಕೋಪಾ ಅಮೆರಿಕ ಟೂರ್ನಿಯ ಮೇಲೆ ಭ್ರಷ್ಟಾಚಾರ ಆರೋಪ ಮಾಡಿರುವ ಲಿಯೊನೆಲ್ ಮೆಸ್ಸಿ ಅವರನ್ನು ದಕ್ಷಿಣ ಅಮೆರಿಕ ಫುಟ್ಬಾಲ್ ಮಂಡಳಿ ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ.

 ಜುಲೈನಲ್ಲಿ ನಡೆದ ಟೂರ್ನಮೆಂಟ್‌ನ ಪ್ಲೇ-ಆಫ್ ಪಂದ್ಯದ ಬಳಿಕ ಅರ್ಜೆಂಟೀನ ತಂಡ ಚಿಲಿ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದ ಬಳಿಕ ಅರ್ಜೆಂಟೀನದ ಸೂಪರ್‌ಸ್ಟಾರ್ ಮೆಸ್ಸಿ ಭ್ರಷ್ಟಾಚಾರ ಆರೋಪ ಹೊರಿಸಿದ್ದರು. ಅವರ ಈ ಹೇಳಿಕೆಗೆ 50,000 ಯುಎಸ್ ಡಾಲರ್ ದಂಡವನ್ನು ವಿಧಿಸಲಾಗಿದೆ ಎಂದು ದ.ಅಮೆರಿಕ ಫುಟ್ಬಾಲ್ ಮಂಡಳಿ ತಿಳಿಸಿದೆ.

ಮೆಸ್ಸಿ 3 ತಿಂಗಳ ನಿಷೇಧ ಎದುರಿಸುತ್ತಿರುವ ಕಾರಣ ಈ ವರ್ಷ ನಾಲ್ಕು ಸೌಹಾರ್ದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮೆಸ್ಸಿ ಹಾಗೂ ಅರ್ಜೆಂಟೀನ ತಂಡಕ್ಕೆ ನಿಷೇಧ ವಿರುದ್ದ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

ಮೆಸ್ಸಿ ವೃತ್ತಿಬದುಕಿನಲ್ಲಿ ಎರಡನೇ ಬಾರಿ ಅಮಾನತು ಶಿಕ್ಷೆ ಎದುರಿಸುತ್ತಿದ್ದಾರೆ. ಆತಿಥೇಯ ಬ್ರೆಝಿಲ್ ತಂಡ ಜಯ ಸಾಧಿಸುವುದಕ್ಕೆ ಪೂರಕವಾಗಿ ಕೋಪಾ ಅಮೆರಿಕ ಟೂರ್ನಿಯನ್ನು ಸಜ್ಜುಗೊಳಿಸಲಾಗಿತ್ತು ಎಂದು ಮೆಸ್ಸಿ ಆರೋಪಿಸಿದ್ದರು. ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಬ್ರೆಝಿಲ್ ವಿರುದ್ಧ 0-2 ಅಂತರದಿಂದ ಸೋತಿರುವುದನ್ನು ಉಲ್ಲೇಖಿಸಿ ಮೆಸ್ಸಿ ಈಗಾಗಲೇ ಕೋಪಾ ಅಮೆರಿಕ ವಿರುದ್ಧ ದೂರು ದಾಖಲಿಸಿದ್ದಾರೆ.

ಹೇಳಿಕೆ ನೀಡಿರುವ ಕಾರಣಕ್ಕೆ ಅಮಾನತುಗೊಂಡಿರುವುದಕ್ಕೆ ಭಯವಾಗಿಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೆಸ್ಸಿ, ಸತ್ಯವನ್ನು ಬಹಿರಂಗಪಡಿಸುವ ಅಗತ್ಯವಿದೆ ಎಂದರು. ತನ್ನ ಹೇಳಿಕೆಗೆ ದಕ್ಷಿಣ ಅಮೆರಿಕ ಫುಟ್ಬಾಲ್ ಮಂಡಳಿಗೆ ಕ್ಷಮೆ ಪತ್ರವನ್ನು ಕಳುಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News