‘ಅಪ್ಸರಾ’ ಪರಮಾಣು ಕೇಂದ್ರ ಕಾರ್ಯಾರಂಭ

Update: 2019-08-03 18:49 GMT

1914: ಪ್ರಥಮ ಜಾಗತಿಕ ಮಹಾಯುದ್ಧದಲ್ಲಿ ಜರ್ಮನ್ ಸೈನಿಕರು ಬೆಲ್ಜಿಯನ್ ಪಾದ್ರಿಗಳನ್ನು ಗುಂಡು ಹಾರಿಸಿ ಕೊಂದು, ಸುಟ್ಟು ಹಾಕಿದರು. ಅಮೆರಿಕ ಮೊದಲ ಮಹಾಯುದ್ಧದಿಂದ ತಟಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಂಡಿತು.

1935: ಭಾರತ ಸರಕಾರದ ಕಾಯ್ದೆ-1935 ಬ್ರಿಟನ್‌ನ ರಾಜಪ್ರಭುತ್ವದ ಒಪ್ಪಿಗೆ ಪಡೆಯಿತು.

1946: ಉತ್ತರ ಡೊಮಿನಿಕನ್ ಗಣರಾಜ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 100 ಜನ ಸಾವಿಗೀಡಾದರು. 20,000 ಜನರು ನಿರ್ವಸಿತರಾದರು.

1947: ಜಪಾನ್‌ನ ಸುಪ್ರೀಂ ಕೋರ್ಟ್ ಸ್ಥಾಪನೆಯಾಯಿತು.

1956: ಭಾರತದ ಪ್ರಪ್ರಥಮ ಪರಮಾಣು ಕೇಂದ್ರ ‘ಅಪ್ಸರಾ’ ತ್ರಾಂಬೆಯ ಭಾಭಾ ಅಣು ಸಂಶೋಧನಾ ಸಂಸ್ಥೆಯಿಂದ ಕಾರ್ಯಾರಂಭ ಮಾಡಿತು. ಇದು ಏಶ್ಯದಲ್ಲಿಯೇ ಪ್ರಥಮ ಪರಮಾಣು ಕೇಂದ್ರವಾಗಿದೆ. ಖ್ಯಾತ ಭೌತ ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ ಅವರ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡ ಇದು ಸಂಪೂರ್ಣವಾಗಿ ಭಾರತೀಯ ಇಂಜಿನಿಯರ್‌ಗಳಿಂದಲೇ ರಚಿಸಲ್ಪಟ್ಟಿದೆ.

1980: ಟೆಕ್ಸಾಸ್ ಹಾಗೂ ಕೆರಿಬಿಯನ್‌ನಲ್ಲಿ ಬೀಸಿದ ಪ್ರಬಲ ಚಂಡಮಾರುತಕ್ಕೆ 272 ಜನರು ಬಲಿಯಾದ ವರದಿಯಾಗಿದೆ.

2015: ಮಧ್ಯಪ್ರದೇಶದಲ್ಲಿ ಸೇತುವೆಯೊಂದರ ಮೇಲೆ ಸಾಗುತ್ತಿದ್ದ ಎರಡು ಪ್ರಯಾಣಿಕ ರೈಲುಗಳು ಪ್ರವಾಹಕ್ಕೆ ಸಿಕ್ಕಿ ಭಾಗಶಃ ಮುಳುಗಿದವು. ಈ ಸಂದರ್ಭದಲ್ಲಿ 31 ಜನ ಸಾವಿಗೀಡಾದರು.

2007: ನಾಸಾದಿಂದ ಫೀನಿಕ್ಸ್ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಾಯಿತು.

1929: ಬಾಲಿವುಡ್‌ನ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಕಿಶೋರ್‌ಕುಮಾರ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ