ಭಾರತದ ವನಿತೆಯರಿಗೆ ಜಯ

Update: 2019-08-05 01:49 GMT

ಮ್ಯಾಡ್ರಿಡ್, ಆ.4: ಸ್ಪೇನ್‌ನಲ್ಲಿ ನಡೆಯುತ್ತಿರುವ ಕಾಟಿಫ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಭಾರತದ ವನಿತೆಯರ ತಂಡ ಬೋಲಿವಿಯಾ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.

  ಇಂದು ನಡೆದ ಎರಡನೇ ಪಂದ್ಯದಲ್ಲಿ 2ನೇ ನಿಮಿಷದಲ್ಲಿ ಶ್ವೇತಾ ದೇವಿ ಮಾಡಿಕೊಂಡ ಯಡವಟ್ಟಿನಿಂದಾಗಿ ಬೋಲಿವಿಯಾ ಖಾತೆಗೆ ಮೊದಲ ಗೋಲು ಜಮೆ ಆಗಿತ್ತು. ಅವರ ಸ್ವಯಂಗೋಲು ಎದುರಾಳಿ ತಂಡಕ್ಕೆ ಆರಂಭದಲ್ಲಿ ಮುನ್ನಡೆ ಸಾಧಿಸಲು ನೆರವಾಯಿತು.

ಬಾಲದೇವಿ 5ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ಗೋಲು ಖಾತೆ ತೆರೆದು 1-1 ಸಮಬಲ ಸಾಧಿಸಿದರು.

 ಬಾಲದೇವಿ 5ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ಗೋಲು ಖಾತೆ ತೆರೆದು 1-1 ಸಮಬಲ ಸಾಧಿಸಿದರು. 36ನೇ ನಿಮಿಷದಲ್ಲಿ ರತ್ನಬಾಲಾ ದೇವಿ ಗೋಲು ಜಮೆ ಮಾಡಿ 2-1 ಮುನ್ನಡೆಗೆ ನೆರವಾದರು. ರತ್ನಬಾಲಾ ದೇವಿ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಗೋಲು ಜಮೆ ಮಾಡಿದರು. ಇದರೊಂದಿಗೆ ಭಾರತ 3-1 ಮುನ್ನಡೆಯೊಂದಿಗೆ ಗೆಲುವಿನ ನಗೆ ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News