ಹವಾಮಾನ ಬದಲಾವಣೆಯಿಂದ ಆಹಾರ ಕೊರತೆ: ವಿಶ್ವಸಂಸ್ಥೆ ವರದಿ

Update: 2019-08-08 17:05 GMT

ವಿಶ್ವಸಂಸ್ಥೆ, ಆ. 8: ತೀವ್ರ ಮಾದರಿಯ ಹವಾಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಿರ ಆಹಾರ ಉತ್ಪಾದನೆಗೆ ಪ್ರತಿ ದಿನ ಹೆಚ್ಚೆಚ್ಚು ಅಡ್ಡಿ ಆತಂಕಗಳು ಉಂಟಾಗುತ್ತಿವೆ ಹಾಗೂ ಇದು ಬಡವರ ಮೇಲೆ ಅಂತಿಮ ಪ್ರಹಾರವನ್ನು ನೀಡಲಿವೆ ಎಂದು ಹವಾಮಾನ ಬದಲಾವಣೆ ಕುರಿತ ಅಂತರ್‌ಸರಕಾರಿ ಸಮಿತಿಯೊಂದು ಗುರುವಾರ ತನ್ನ ವರದಿಯೊಂದರಲ್ಲಿ ತಿಳಿಸಿದೆ.

ಅದೂ ಅಲ್ಲದೆ, ಆಹಾರ ಉತ್ಪಾದನೆ ಮತ್ತು ಮರದ ದಿಮ್ಮಿಗಳಿಗಾಗಿ ಭೂಮಿಯ ಹೆಚ್ಚು ಜಮೀನನ್ನು ಬಳಸುತ್ತಿರುವುದರಿಂದಾಗಿ ಹವಾಮಾನ ಬದಲಾವಣೆಯ ಪರಿಣಾಮಗಳು ತೀವ್ರಗೊಂಡಿವೆ ಎಂದು ಅದು ಹೇಳಿದೆ. ಹೆಚ್ಚು ಭೂಮಿಯ ಬಳಕೆಯೊಂದಿಗೆ ನೈಸರ್ಗಿಕ ನೀರಿನ ಸ್ಥಳಗಳು ಮತ್ತು ಹಸಿರು ಮನೆ ಅನಿಲಗಳನ್ನು ಹಿಡಿದಿಡುವ ಅರಣ್ಯಗಳು ನಾಶವಾಗುತ್ತವೆ ಎಂದು ವರದಿ ಹೇಳಿದೆ.

ಅಮೆರಿಕದ ಮಿನಸೋಟ ರಾಜ್ಯದ ಸೇಂಟ್ ಪೌಲ್‌ನಲ್ಲಿರುವ ರಾಜ್ಯ ಶಾಸಕಾಂಗ ಕಟ್ಟಡದ ಎದುರು ಜನರು ಬುಧವಾರ ಬಂದೂಕು ಹಿಂಸೆಯ ವಿರುದ್ಧ ಪ್ರತಿಭಟನೆ ನಡೆಸಿದರು.

ಹಜ್ ಯಾತ್ರಿಗಳು ಮಂಗಳವಾರ ಮಕ್ಕಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News