ರಾಜೀವ್‌ ಗಾಂಧಿ ಸದ್ಭಾವನಾ ಯಾತ್ರೆಗೆ ಚಾಲನೆ

Update: 2019-08-08 18:22 GMT

ಬೆಂಗಳೂರು, ಆ.8: ರಾಜೀವ್‌ ಗಾಂಧಿ 28 ನೆ ವರ್ಷದ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಇಂದಿಲ್ಲಿ ಚಾಲನೆ ನೀಡಿದರು.

ಗುರುವಾರ ನಗರದ ಕಾಂಗ್ರೆಸ್ ಕಚೇರಿ ಎದುರು ಯಾತ್ರೆಗೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಈಶ್ವರ್ ಖಂಡ್ರೆ, ದೇಶದಲ್ಲಿ ಸೌಹಾರ್ದತೆ, ಭಯೋತ್ಪಾದನೆ ಹಾಗೂ ಕೋಮು ಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿ, ಸುವ್ಯವಸ್ಥೆ ಸಹಬಾಳ್ವೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಭಯೋತ್ಪಾದನೆ ನಾಶ ಮಾಡುವ ಗುರಿಯನ್ನಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಅಭಿವೃದ್ಧಿಯೇ ಪರಮಗುರಿ ಎಂದು ಹಲವಾರು ನಾಯಕರು ಹೋರಾಟ ನಡೆಸಿರುವುದು ನಮ್ಮ ಪಕ್ಷದವರೇ ಆಗಿದ್ದಾರೆ ಎಂದರು.

ನಗರದಲ್ಲಿ ಆರಂಭವಾಗಿರುವ ರಾಜೀವ್ ಗಾಂಧಿ ಸದ್ಭಾವನ ಜ್ಯೋತಿ ಯಾತ್ರೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳದ ಮೂಲಕ ಆ.19 ರಂದು ಹೊಸ ದಿಲ್ಲಿ ತಲುಪಲಿದ್ದು, 20ಕ್ಕೆ ರಾಜೀವ್‌ಗಾಂಧಿ ಸ್ಮರಣಾರ್ಥ ಸ್ಥಳ ತಲುಪಲಿದೆ.

ಜ್ಯೋತಿ ಸಂಚರಿಸುವ ರಸ್ತೆ ಉದ್ದಕ್ಕೂ ರಾಜೀವ್ ಗಾಂಧಿ ಆದರ್ಶ ಹಾಗೂ ವಿಚಾರಧಾರೆಗಳ ಅಂಶಗಳನ್ನು ಒಳಗೊಂಡ ಸಂದೇಶ ಸಾರುವ ಸದುದ್ದೇಶ ಹೊಂದಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News