ಬೆಂಗಳೂರು: ಆ.25 ರಿಂದ 'ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ'

Update: 2019-08-13 13:35 GMT

ಬೆಂಗಳೂರು, ಆ.13: ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆ.25 ರಿಂದ 27ರ ವರೆಗೆ ನಗರದ ದಿ ಲಲಿತ್ ಅಶೋಕ್ ನಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಮೇಳ - 2019 ಆಯೋಜಿಸಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು  ಆ.25 ರಂದು ಮೇಳವನ್ನು ಉದ್ಘಾಟಿಸಲಿದ್ದಾರೆ.

ವ್ಯಾವಹಾರಿಕ ಸಭೆಗಳ ಆಧಾರಿತ ಈ ಮೇಳದಲ್ಲಿ  250 ರಾಷ್ಟ್ರೀಯ ಹಾಗೂ 150 ಅಂತಾರಾಷ್ಟ್ರೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ  ಕೆ ಎನ್ ರಮೇಶ್ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News