ಭಾರತ-ಬಾಂಗ್ಲಾ ಯೋಧರ ಮಧ್ಯೆ ಸಿಹಿ ವಿನಿಮಯ

Update: 2019-08-15 14:30 GMT

ಕೋಲ್ಕತಾ, ಆ.15: ಭಾರತ- ಬಾಂಗ್ಲಾ ಗಡಿಯಲ್ಲಿ ಭಾರತದ ಗಡಿಭದ್ರತಾ ಪಡೆ(ಬಿಎಸ್‌ಎಫ್) ಮತ್ತು ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ(ಬಿಜಿಬಿ) ಯೋಧರು ಭಾರತದ 73ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಗಡಿಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಉಭಯ ರಾಷ್ಟ್ರಗಳ ಯೋಧರು ಧಾರ್ಮಿಕ ಮತ್ತು ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಸದ್ಭಾವನೆಯ ಸಂಕೇತವಾಗಿ ಪರಸ್ಪರ ಸಿಹಿ ಹಂಚಿಕೊಳ್ಳುವ ಸಂಪ್ರದಾಯವಿದೆ.

ರಾಜತಾಂತ್ರಿಕ ಸಂಬಂಧ ಹದಗೆಟ್ಟ ಕೆಲವು ಸಂದರ್ಭ ಹೊರತುಪಡಿಸಿ ನೆರೆಹೊರೆಯ ದೇಶಗಳ ಸೈನಿಕರೊಂದಿಗೆ ಗಡಿಯಲ್ಲಿ ಭಾರತೀಯ ಸೈನಿಕರು ಸಿಹಿ ಹಂಚಿಕೊಳ್ಳುವ ಪ್ರಕ್ರಿಯೆ ನಿರಂತರ ಸಾಗಿ ಬಂದಿದೆ. ಆದರೆ ಈ ಬಾರಿ ಈ ಪ್ರಕ್ರಿಯೆ ಭಾರತ-ಪಾಕ್ ಸೈನಿಕರ ಮಧ್ಯೆ ನಡೆಯಲಿಲ್ಲ. ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆ ಆಗಸ್ಟ್ 14ರಂದು ನಡೆದಿದ್ದು , ಈ ಹಿಂದಿನಂತೆ ಪಂಜಾಬ್‌ನ ಅಟ್ಟಾರಿ-ವಾಘ ಗಡಿಯಲ್ಲಿ ಭಾರತ-ಪಾಕ್ ಸೈನಿಕರ ಮಧ್ಯೆ ಸಿಹಿತಿಂಡಿ ವಿನಿಮಯ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News