ಭಾರತದ ಮಾಜಿ ಕ್ರಿಕೆಟಿಗ ವಿ.ಬಿ.ಚಂದ್ರಶೇಖರ್ ನಿಧನ

Update: 2019-08-15 18:30 GMT

ಚೆನ್ನೈ, ಆ.15: ಭಾರತ ಹಾಗೂ ತಮಿಳುನಾಡಿನ ಮಾಜಿ ಆರಂಭಿಕ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ ಗುರುವಾರ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.

  ಕ್ರಿಕೆಟ್ ವಲಯದಲ್ಲಿ ವಿಬಿ ಎಂದೇ ಜನಪ್ರಿಯರಾಗಿದ್ದ ಚಂದ್ರಶೇಖರ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆಕ್ರಮಣಕಾರಿ ಆರಂಭಿಕ ಆಟಗಾರನಾಗಿದ್ದ ಅವರು ಭಾರತದ ಪರ 7 ಏಕದಿನ ಪಂದ್ಯಗಳನ್ನು ಆಡಿದ್ದರು. 57 ರನ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.

1988ರಲ್ಲಿ ರಣಜಿ ಟ್ರೋಫಿ ಜಯಿಸಿದ್ದ ತಮಿಳುನಾಡು ತಂಡದ ಸದಸ್ಯರಾಗಿದ್ದ ಚಂದ್ರಶೇಖರ್ ಕೋಚಿಂಗ್ ಹಾಗೂ ವೀಕ್ಷಕವಿವರಣೆಯತ್ತ ಹೆಚ್ಚು ಗಮನ ನೀಡಿದ್ದರು. ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News