ಈ ಜಿಲ್ಲೆಯ ನಾಲ್ಕು ತಾಲೂಕುಗಳೂ ಬರಪೀಡಿತ

Update: 2019-08-17 16:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.17: ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲೂಕುಗಳೂ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿರುತ್ತದೆ.

ಬರಪೀಡಿತ ತಾಲೂಕುಗಳಲ್ಲಿರುವ ಜಾನುವಾರುಗಳ ರಕ್ಷಣೆಗಾಗಿ ರಾಮಕೃಷ್ಣಪುರ ಕೃಷಿ ತರಬೇತಿ ಕೇಂದ್ರ, ಆನೇಕಲ್ ಅಮೃತಧಾರಾ ಗೋಶಾಲೆ, ದಿಣ್ಣಿಪಾಳ್ಯ ಬೆಂ.ದಕ್ಷಿಣ ತಾಲೂಕು, ಶ್ರೀಕೃಷ್ಣ ಗೋಶಾಲೆ ದೊಡ್ಡಗುಬ್ಬಿ, ಬೆಂ.ಪೂರ್ವ ತಾಲೂಕು ಹಾಗೂ ಬೆಂಗಳೂರು ಗೋರಕ್ಷಣಾ ಶಾಲೆ ದೊಡ್ಡನೆಕ್ಕುಂದಿ ಬೆಂ.ಪೂರ್ವ ತಾಲೂಕು ಇಲ್ಲಿ ಜಾನುವಾರುಗಳಿಗಾಗಿ ಗೋಶಾಲೆಗಳನ್ನು ತೆರೆಯಲಾಗಿರುತ್ತದೆ.

ನಗರ ಜಿಲ್ಲೆಯಲ್ಲಿ ಈವರೆಗೆ ಒಟ್ಟು ನಾಲ್ಕು ಗೋಶಾಲೆಗಳನ್ನು ತೆರೆಯಲಾಗಿದ್ದು. ಸದರಿ ತಾಲೂಕುಗಳ ವ್ಯಾಪ್ತಿಗೆ ಒಳಪಡುವ ರೈತರುಗಳು ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದಲ್ಲಿ ಗೋಶಾಲೆಗಳಲ್ಲಿ ಬಿಡಲು ನೋಂದಾಯಿಸಬಹುದು. ರೈತರುಗಳು ಗೋಶಾಲೆಗಳನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News