ತಲೈವಾಸ್ಗೆ ತಿವಿದ ಬುಲ್ಸ್

Update: 2019-08-17 18:37 GMT

ಚೆನ್ನೈ, ಆ.17: ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ತಂಡ ಶನಿವಾರ ತಮಿಳ್ ತಲೈವಾಸ್ ತಂಡವನ್ನು ಅದರದೇ ನೆಲದಲ್ಲಿ ಮಣಿಸಿ ಗೆಲುವಿನ ಹಳಿಗೆ ಮರಳಿದೆ.

ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ 45ನೇ ಪಂದ್ಯದಲ್ಲಿ ಬೆಂಗಳೂರು ತಂಡ ತಮಿಳ್ ತಲೈವಾಸ್ ತಂಡವನ್ನು 32-21 ಅಂಕಗಳ ಅಂತರದಿಂದ ಮಣಿಸಿತು.

11 ಅಂಕ ಗಳಿಸಿದ ಪವನ್‌ಕುಮಾರ್ ಬೆಂಗಳೂರಿನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ತಮಿಳ್ ಪರ ಅಜಯ್ ಠಾಕೂರ್ ಹಾಗೂ ರಾಣ್ ಸಿಂಗ್ ತಲಾ 4 ಅಂಕ ಗಳಿಸಿದರು. ಲೀಗ್‌ನಲ್ಲಿ ಆಡಿದ 8ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿದ ಬೆಂಗಳೂರು ಒಟ್ಟು 27 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ತಮಿಳ್ ತಂಡ ತಾನಾಡಿದ 7ನೇ ಪಂದ್ಯದಲ್ಲಿ 3ನೇ ಸೋಲುನುಭವಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News