ಇಸ್ರೇಲ್ ದಾಳಿಯಲ್ಲಿ 3 ಫೆಲೆಸ್ತೀನಿಯರು ಮೃತ್ಯು

Update: 2019-08-18 13:49 GMT

ಗಾಝಾ ಸಿಟಿ (ಫೆಲೆಸ್ತೀನ್), ಆ. 18: ಉತ್ತರ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೈನಿಕರು ನಡೆಸಿದ ದಾಳಿಯಲ್ಲಿ ಮೂವರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ಗಾಝಾ ಪಟ್ಟಿಯಿಂದ ಇಸ್ರೇಲ್‌ನತ್ತ ಮೂರು ರಾಕೆಟ್‌ಗಳು ಹಾರಿದ ಗಂಟೆಗಳ ಬಳಿಕ ಈ ದಾಳಿ ನಡೆಯಿತು.

ಇಸ್ರೇಲ್ ಮತ್ತು ಗಾಝಾವನ್ನು ಪ್ರತ್ಯೇಕಿಸುವ ಬೇಲಿಯುದ್ದಕ್ಕೂ ‘ಶಸ್ತ್ರಧಾರಿ ಶಂಕಿತ’ರನ್ನು ಗುರಿಯಾಗಿಸಿ ಹೆಲಿಕಾಪ್ಟರ್‌ಗಳು ಮತ್ತು ಟ್ಯಾಂಕ್‌ಗಳು ಗುಂಡು ದಾಳಿ ನಡೆಸಿದವು ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಶನಿವಾರ ರಾತ್ರಿ ಹಮಾಸ್ ಆಡಳಿತದ ಗಾಝಾ ಪಟ್ಟಿಯಿಂದ ದಕ್ಷಿಣ ಇಸ್ರೇಲ್‌ನತ್ತ ಮೂರು ರಾಕೆಟ್‌ಗಳು ಹಾರಿದ ಬಳಿಕ ಹೊಸ ಸುತ್ತಿನ ಹಿಂಸಾಚಾರ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇದು 24 ಗಂಟೆಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ಹಿಂಸಾಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News