ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತದಿಂದಾಗಿ 23 ಮಂದಿ ಸಾವು

Update: 2019-08-19 05:05 GMT

ಶಿಮ್ಲಾ, ಆ.19:   ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ, ಭೂಕುಸಿತದಿಂದಾಗಿ ಈ ವರೆಗೆ   ಕನಿಷ್ಠ 23 ಜನರು ಮೃತಪಟ್ಟಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯು ಅಪಾರ ಹಾನಿಯನ್ನುಂಟುಮಾಡಿದೆ.  ಸತತ ಮಳೆಯಿಂದಾಗಿ ಕುಲ್ಲು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿ ಹಲವು ರಸ್ತೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಮನಾಲಿ ಮತ್ತು ಕುಲ್ಲು ನಡುವಿನ ರಾಷ್ಟ್ರೀಯ ಹೆದ್ದಾರಿ 3 ಭಾಗಶಃ ಹಾನಿಯಾಗಿದೆ ಎಂದು  ಎಂದು ಸುದ್ದಿ ಸಂಸ್ಥೆಯೊಂದು   ವರದಿ ಮಾಡಿದೆ.

ರವಿವಾರ ಬಿಯಾಸ್ ನದಿಯಲ್ಲಿ  ಪ್ರವಾಹ ಜಾಸ್ತಿಯಾದ ಪರಿಣಾಮವಾಗಿ  ಹಲವು ಮಂದಿ ಪ್ರವಾಸಿಗರು ಕುಲ್ಲುವಿನ ಬಕರ್ಥಾಚ್ ಪ್ರದೇಶದಲ್ಲಿ ಸಿಲುಕಿಕೊಂಡರು ಮತ್ತು ಸ್ಥಳೀಯಾಡಳಿತವು ಹಗ್ಗಗಳನ್ನು ಬಳಸಿ ಅವರನ್ನು ಪಾರು ಮಾಡಿದೆ. ರಾಜ್ಯದ ಇತರೆಡೆ ಪರಿಸ್ಥಿತಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಉತ್ತರಕಾಶಿ ಮತ್ತು ಹಿಮಾಚಲ ಗಡಿ ಪ್ರದೇಶದಲ್ಲಿ ಮಳೆಗೆ  ಆರು ಜನರು ರವಿವಾರ ಮೃತಪಟ್ಟಿದ್ದಾರೆ. ಕುಲ್ಲು ಜಿಲ್ಲೆಯಲ್ಲಿ ಮಳೆ ಗೆ  ಇಬ್ಬರು ಬಲಿಯಾಗಿದ್ದಾರೆ.

 ಹವಾಮಾನ ಇಲಾಖೆ  ಪ್ರಕಾರ ರವಿವಾರ   24 ಗಂಟೆಗಳಲ್ಲಿ 102.5 ಮಿ.ಮೀ ಮಳೆಯಾಗಿದೆ  ಇದು ಒಂದೇ ದಿನದಲ್ಲಿ ಅತಿ ಹೆಚ್ಚು. ಬಿಲಾಸ್ಪುರ್ ಜಿಲ್ಲೆಯಲ್ಲಿ ಅತಿ ಹೆಚ್ಚು 252 ಮಿ.ಮೀ ಮಳೆಯಾಗಿದೆ,ಮಳೆಗೆ  ಶಿಮ್ಲಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News