ಹರ್ಯಾಣಕ್ಕೆ ರೋಚಕ ಜಯ

Update: 2019-08-19 18:32 GMT

ಚೆನ್ನೈ, ಆ.19: ಹರ್ಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ನಡೆದ 49ನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 30-27 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದೆ.

 ಹರ್ಯಾಣ ತಂಡ ಮುಂಬಾ ವಿರುದ್ಧ ಆಡಿದ 5ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿತು. ಪ್ರಸ್ತುತ ಟೂರ್ನಿಯಲ್ಲಿ ಆಡಿದ 9ನೇ ಪಂದ್ಯದಲ್ಲಿ 5ನೇ ಗೆಲುವು ಪಡೆದ ಹರ್ಯಾಣ ಒಟ್ಟು 26 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹರ್ಯಾಣದ ವಿಕಾಸ್ ಖಂಡೋಲ 9 ಅಂಕ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮುಂಬಾ ಪರ ಅಭಿಷೇಕ್ ಸಿಂಗ್ 6 ಹಾಗೂ ಸಂದೀಪ್ ನರ್ವಾಲ್ 5 ಅಂಕ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News