ಚಳವಳಿ ದುರ್ಬಲಗೊಳಿಸಲು ನಕಲಿ ಖಾತೆಗಳನ್ನು ಸೃಷ್ಟಿಸುತ್ತಿರುವ ಚೀನಾ

Update: 2019-08-20 17:01 GMT

ಹಾಂಕಾಂಗ್, ಆ. 20: ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಚಳವಳಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾತೃಭೂಮಿ ಚೀನಾದಲ್ಲಿ ನಡೆಯುತ್ತಿರುವ ಸರಕಾರ ಬೆಂಬಲಿತ ಸಾಮಾಜಿಕ ಮಾಧ್ಯಮ ಅಭಿಯಾನವೊಂದನ್ನು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಟ್ವಿಟರ್ ಮತ್ತು ಫೇಸ್‌ ಬುಕ್ ಕಂಪೆನಿಗಳು ಸೋಮವಾರ ಹೇಳಿವೆ.

 ನಾವು 936 ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಟ್ವಿಟರ್ ಹೇಳಿದೆ ಹಾಗೂ ಈ ಚಟುವಟಿಕೆಯು ಚೀನಾದಲ್ಲಿ ಆರಂಭಗೊಂಡಿರುವ ಸುವ್ಯವಸ್ಥಿತ ಸರಕಾರ ಬೆಂಬಲಿತ ಅಭಿಯಾನದಂತೆ ಕಂಡುಬರುತ್ತಿದೆ ಎಂದು ಅದು ತಿಳಿಸಿದೆ. ಈ ಖಾತೆಗಳು ಈ ಅಭಿಯಾನದ ಅತ್ಯಂತ ಸಕ್ರಿಯ ಭಾಗಗಳಾಗಿವೆ ಹಾಗೂ ಸುಮಾರು 2 ಲಕ್ಷ ಖಾತೆಗಳನ್ನೊಳಗೊಂಡ ಬೃಹತ್ ಜಾಲವನ್ನು ಅದು ಗಮನಾರ್ಹ ಪ್ರಮಾಣದಲ್ಲಿ ಸಕ್ರಿಯಗೊಳ್ಳುವ ಮೊದಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

ಅದೇ ವೇಳೆ, ಟ್ವಿಟರ್‌ನಿಂದ ಸುಳಿವು ಪಡೆದುಕೊಂಡು, ಸಣ್ಣ ಜಾಲವೊಂದರ ಖಾತೆಗಳು ಮತ್ತು ಪುಟಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ಫೇಸ್‌ ಬುಕ್ ಹೇಳಿದೆ. ಈ ಜಾಲಕ್ಕೂ ಚೀನಾ ಸರಕಾರದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೂ ನಂಟು ಇರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News