ಅಂಕಿತಾ ರೈನಾ ದ್ವಿತೀಯ ಸುತ್ತಿಗೆ, ರಾಮ್‌ಕುಮಾರ್‌ಗೆ ಸೋಲು

Update: 2019-08-20 18:32 GMT

ನ್ಯೂಯಾರ್ಕ್,ಆ.20: ಬೆಲ್ಜಿಯಂನ ಸಲಿನ್ ಬೊನಾವೆಂಟರ್‌ರನ್ನು ಮಣಿಸಿದ ಭಾರತದ ಅಂಕಿತಾ ರೈನಾ ಯುಎಸ್ ಓಪನ್ ಕ್ವಾಲಿಫೈಯರ್‌ನಲ್ಲಿ ಎರಡನೇ ಸುತ್ತಿಗೆ ತಲುಪಿದರು. ಪುರುಷರ ಸಿಂಗಲ್ಸ್‌ನಲ್ಲಿ ರಾಮಕುಮಾರ್ ರಾಮನಾಥನ್ ಸೋಲನುಭವಿಸಿದರು. 194ನೇ ರ್ಯಾಂಕಿನ ಅಂಕಿತಾ ತನಗಿಂತ ಗರಿಷ್ಠ ರ್ಯಾಂಕಿನ ಬೆಲ್ಜಿಯಂನ ಬೊನಾವೆಂಟರ್‌ರನ್ನು 6-1, 1-6, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ರೈನಾ ಎರಡನೇ ಬಾರಿ ಬೆಲ್ಜಿಯಂ ಆಟಗಾರ್ತಿಯನ್ನು ಮಣಿಸಿದರು. 2014ರಲ್ಲಿ ಭಾರತದಲ್ಲಿ ನಡೆದ ಪಂದ್ಯದಲ್ಲಿ ರೈನಾ 111ನೇ ರ್ಯಾಂಕಿನ ಆಟಗಾರ್ತಿಯನ್ನು ಸೋಲಿಸಿದ್ದರು. ಗ್ರಾನ್‌ಸ್ಲಾಮ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ದಾಟಲು ವಿಫಲವಾಗಿರುವ ರೈನಾ ಮುಂದಿನ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಡೆನಿಯಾ ಅಲ್ಲೆರ್ಟೊವಾರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ರಾಮಕುಮಾರ್ ರಾಮನಾಥನ್ ಇಟಲಿಯ ಫಿಲಿಪ್ಪೊ ಬಲ್ಡಿ ಎದುರು 5-7, 6-7(9)ಸೆಟ್‌ಗಳಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News