ಭಾರತ- ವೆಸ್ಟ್‌ಇಂಡೀಸ್ ಅಭ್ಯಾಸ ಪಂದ್ಯ ಡ್ರಾ

Update: 2019-08-20 18:35 GMT

ಸೈಂಟ್‌ಜಾನ್ಸ್(ಆ್ಯಂಟಿಗುವಾ), ಆ.20: ಭಾರತ ಹಾಗೂ ವೆಸ್ಟ್‌ಇಂಡೀಸ್ ‘ಎ’ ನಡುವಿನ ಮೂರು ದಿನದ ಅಭ್ಯಾಸ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಕೊನೆಯ ದಿನವಾದ ಸೋಮವಾರ ಭಾರತ ಉಪ ನಾಯಕ ಅಜಿಂಕ್ಯ ರಹಾನೆ ಅರ್ಧಶತಕ ಗಳಿಸಿದರು.

ಎರಡು ವರ್ಷಗಳ ಹಿಂದೆ ಶತಕ ಗಳಿಸಿದ್ದ ರಹಾನೆ ರಿವರ್ಸ್‌ಸ್ವೀಪ್‌ಗೆ ವಿಕೆಟ್ ಒಪ್ಪಿಸುವ ಮೊದಲು 162 ಎಸೆತಗಳಲ್ಲಿ 54 ರನ್ ಗಳಿಸಿದರು. ಮೊದಲ ಇನಿಂಗ್ ್ಸನಲ್ಲಿ ವಿಫಲರಾಗಿದ್ದ ಮುಂಬೈ ಬ್ಯಾಟ್ಸ್‌ಮನ್ ರಹಾನೆ ಹಾಗೂ ಹನುಮ ವಿಹಾರಿ 1 ವಿಕೆಟ್ ನಷ್ಟಕ್ಕೆ 84 ರನ್‌ನಿಂದ ಇನಿಂಗ್ಸ್ ಮುಂದುವರಿಸಿದರು. ಇಬ್ಬರೂ ಬ್ಯಾಟ್ಸ್ ಮನ್‌ಗಳು ಅರ್ಧಶತಕ ಗಳಿಸಲು ಸಮರ್ಥರಾದರು.

 48 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಹಾರಿ 125 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರು. ಆಫ್ ಸ್ಪಿನ್ನರ್ ಅಕಿಮ್ ಫ್ರಝೆರ್ ಅವರು ರಹಾನೆ ಹಾಗೂ ವಿಹಾರಿಗೆ ಪೆವಿಲಿಯನ್ ಹಾದಿ ತೋರಿಸಿದರು. ರಿಷಭ್ ಪಂತ್(19) ಹಾಗೂ ರವೀಂದ್ರ ಜಡೇಜ(9)ಲಂಚ್ ವಿರಾಮಕ್ಕೆ ಮೊದಲೇ ಔಟಾದರು. ಭೋಜನ ವಿರಾಮದ ವೇಳೆಗೆ ಭಾರತ 174 ರನ್‌ಗೆ 5 ವಿಕೆಟ್‌ಗಳ ಕಳೆದುಕೊಂಡಿತು. 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದ ಬಳಿಕ ಇನಿಂಗ್ಸ್ ಡಿಕ್ಲೇರ್ ಮಾಡಿದ ಭಾರತ ತಂಡ ವಿಂಡೀಸ್ ವಿರುದ್ಧ ಒಟ್ಟು 304 ರನ್ ಮುನ್ನಡೆ ಸಾಧಿಸಿತು. ಭಾರತ ಮೊದಲ ಇನಿಂಗ್ಸ್ 6ಕ್ಕೆ 297 ರನ್‌ಗೆಉತ್ತರವಾಗಿ ವಿಂಡೀಸ್ 181 ರನ್‌ಗೆ ಆಲೌಟಾಯಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ವಿಂಡೀಸ್ ಟೀ ವಿರಾಮದ ವೇಳೆಗೆ 21 ಓವರ್‌ಗಳಲ್ಲಿ 47 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಆಗ ಉಭಯ ತಂಡಗಳು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದವು. ಜಸ್‌ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.

ಭಾರತ ಗುರುವಾರದಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್

► ಭಾರತ: 297/5 ಡಿಕ್ಲೇರ್ ಹಾಗೂ 188/5 ಡಿಕ್ಲೇರ್ (ಹನುಮ ವಿಹಾರಿ 64, ಅಜಿಂಕ್ಯ ರಹಾನೆ 54)

► ವೆಸ್ಟ್‌ಇಂಡೀಸ್ ಎ: 181 ರನ್‌ಗೆ ಆಲೌಟ್ ಹಾಗೂ 21 ಓವರ್‌ಗಳಲ್ಲಿ 47/3. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News