ವಿಲಿಯಮ್ಸನ್, ಅಕಿಲ ಧನಂಜಯ ಸಂಶಯಾಸ್ಪದ ಬೌಲಿಂಗ್ ಶೈಲಿ

Update: 2019-08-21 11:57 GMT

ಗಾಲೆ, ಆ.20: ನ್ಯೂಝಿಲ್ಯಾಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಅಕಿಲ ಧನಂಜಯ ಸಂಶಯಾಸ್ಪದ ಬೌಲಿಂಗ್ ಶೈಲಿಯ ಸುಳಿಯಲ್ಲಿ ಸಿಲುಕಿದ್ದಾರೆ.

ಗಾಲೆಯಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್‌ ತಂಡಗಳ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಲಿಯಮ್ಸನ್ ಮತ್ತು ಧನಂಜಯ ವಿರುದ್ಧ ಸಂಶಯಾಸ್ಪದ ಬೌಲಿಂಗ್ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಸಂಶಯಾಸ್ಪದ ಬೌಲಿಂಗ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಮಂಗಳವಾರ ಹೇಳಿಕೆ ನೀಡಿದೆ.

 ಬಲಗೈ ಸ್ಪಿನ್ನರ್‌ಗಳಾದ ವಿಲಿಯಮ್ಸನ್ ಮತ್ತು ಧನಂಜಯ ಅವರು ಬಿಸಿಸಿಐ ತಜ್ಞರ ಸಮಿತಿಯಿಂದ 14 ದಿನಗಳ ಒಳಗಾಗಿ ಬೌಲಿಂಗ್ ಪರೀಕ್ಷೆಗೊಳಗಾಗಲಿದ್ದಾರೆ. ಅಷ್ಟರ ತನಕ ಅವರಿಗೆ ಬೌಲಿಂಗ್‌ನಲ್ಲಿ ಮುಂದುವರಿಯಲು ಸಮಸ್ಯೆ ಇಲ್ಲ.

29ರ ಹರೆಯದ ವಿಲಿಯಮ್ಸನ್ ಎರಡನೇ ಇನಿಂಗ್ಸ್‌ನಲ್ಲಿ 3 ಓವರ್‌ಗಳ ಬೌಲಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ 6 ವಿಕೆಟ್‌ಗಳ ಜಯ ಗಳಿಸಿತ್ತು. 25ರ ಹರೆಯದ ಧನಂಜಯ ಅವರು ಆಲ್‌ರೌಂಡರ್ ಅಗಿದ್ದಾರೆ. ಈ ತನಕ ಕೇವಲ 6 ಟೆಸ್ಟ್‌ಗಳನ್ನು ಆಡಿದ್ದಾರೆ. 33 ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ. ಗಾಲೆ ಟೆಸ್ಟ್‌ನಲ್ಲಿ 6 ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಉಡಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News