ಕಾಶ್ಮೀರ ದ್ವಿಪಕ್ಷೀಯ ವಿಷಯ ಎಂದು ಪಾಕ್‌ಗೆ ಹೇಳಿದ ಫ್ರಾನ್ಸ್

Update: 2019-08-22 11:40 GMT

ಪ್ಯಾರಿಸ್, ಆ. 21: ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಹಾಗೂ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಫ್ರಾನ್ಸ್ ಮಂಗಳವಾರ ಹೇಳಿದೆ.

ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಜೊತೆ ಫೋನ್‌ನಲ್ಲಿ ನಡೆಸಿದ ಮಾತುಕತೆಯ ವೇಳೆ, ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶ ವ್ಯವಹಾರಗಳ ಸಚಿವ ಜೀನ್-ಯವೆಸ್ ಲಿ ಡ್ರಿಯನ್ ಈ ಮಾತುಗಳನ್ನು ಹೇಳಿದರು.

ಕಾಶ್ಮೀರ ಕುರಿತ ಫ್ರಾನ್ಸ್‌ನ ಸುದೀರ್ಘ ನಿಲುವನ್ನು ಮಾತುಕತೆಯ ವೇಳೆ ಫ್ರಾನ್ಸ್ ವಿದೇಶ ಸಚಿವರು ಸ್ಮರಿಸಿಕೊಂಡರು ಹಾಗೂ ‘‘ಶಾಶ್ವತ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಈ ವಿವಾದವನ್ನು ಬಗೆಹರಿಸಬೇಕಾಗಿದೆ’’ ಎಂದು ಸಚಿವರು ಹೇಳಿದರು ಎಂದು ಫ್ರಾನ್ಸ್ ವಿದೇಶ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ಸಂಯಮ ಕಾಪಾಡಿಕೊಳ್ಳುವಂತೆ, ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಹಾಗೂ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಅವರು ಭಾರತ ಮತ್ತು ಪಾಕಿಸ್ತಾನಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News