ಅಂಕಿತಾ ರೈನಾಗೆ ಸೋಲು

Update: 2019-08-22 18:33 GMT

ನ್ಯೂಯಾರ್ಕ್, ಆ.22: ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ರೈನಾ ಸೋತು ನಿರ್ಗಮಿಸಿದ್ದಾರೆ.

ಬುಧವಾರ ರಾತ್ರಿ ಎರಡು ಗಂಟೆ ಹಾಗೂ 17 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.194ನೇ ಆಟಗಾರ್ತಿ ಅಂಕಿತಾ ರೈನಾ ಝೆಕ್ ಗಣರಾಜ್ಯದ ಡೆನಿಸಾ ಅಲ್ಲೆರ್ಟೊವಾಗೆ 7-6(5), 4-6, 2-6 ಸೆಟ್‌ಗಳಿಂದ ಸೋತಿದ್ದಾರೆ.

 ಅಂಕಿತಾ ಮೊದಲ ಸೆಟ್‌ನ್ನು ಟೈ-ಬ್ರೇಕರ್‌ನಲ್ಲಿ ಗೆದ್ದುಕೊಂಡರು. ಆದರೆ, ಮೊದಲ ಸೆಟ್ ಗೆಲುವಿನ ಲಯ ಉಳಿಸಿಕೊಳ್ಳಲು ವಿಫಲರಾದರು. ಡೆನಿಸಾ ಎರಡನೇ ಸೆಟ್‌ನ್ನು 6-4ರಿಂದ ಸುಲಭವಾಗಿ ಗೆದ್ದುಕೊಂಡರು. ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಅಂಕಿತಾ 2-6 ಅಂತರದಿಂದ ಸೋತಿದ್ದಾರೆ.

ಸುಮಿತ್ ನಗಾಲ್ ಕ್ವಾಲಿಫೈಯರ್ ಸುತ್ತಿನಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಸುಮಿತ್ ಕೆನಡಾದ ಪೀಟರ್ ಪೊಲ್ಯಾನ್‌ಸ್ಕಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News