ಎರಡು ವರ್ಷಗಳ ಬಳಿಕ ಶ್ರೀಲಂಕಾ ತಂಡ ಪಾಕ್‌ಗೆ ಪಯಣ

Update: 2019-08-22 18:54 GMT

ಕೊಲಂಬೊ, ಆ.22: ಈ ತಿಂಗಳಾಂತ್ಯದಲ್ಲಿ ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳನ್ನು ಆಡಲು ಶ್ರೀಲಂಕಾ ತಂಡ ಸುಮಾರು ಎರಡು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಎಂದು ಕ್ರೀಡಾ ಸಚಿವರು ಗುರುವಾರ ದೃಢಪಡಿಸಿದರು.

‘‘ಪಾಕಿಸ್ತಾನಕ್ಕೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ನಮ್ಮ ತಂಡವನ್ನು ಕಳುಹಿಸುವ ಪರಿಸ್ಥಿತಿಯಲ್ಲಿಲ್ಲ.ಆದರೆ, ಏಕದಿನ ಅಥವಾ ಟ್ವೆಂಟಿ-20 ಪಂದ್ಯಗಳನ್ನಾಡಲು 8 ದಿನಗಳ ಮಟ್ಟಿಗೆ ನಮ್ಮ ತಂಡವನ್ನು ಪಾಕ್‌ಗೆ ಕಳುಹಿಸಿಕೊಡಲಿದ್ದೇವೆ’’ ಎಂದು ಸಚಿವ ಹರಿನ್ ಫೆರ್ನಾಂಡೊ ಸುದ್ದಿಗಾರರಿಗೆ ತಿಳಿಸಿದರು.

ಪಂದ್ಯಗಳ ದಿನಾಂಕವನ್ನು ಘೋಷಿಸಿಲ್ಲ. ಈ ತಿಂಗಳಾಂತ್ಯದಲ್ಲಿ ಪಂದ್ಯವನ್ನು ನಿಗದಿಪಡಿಸಲಾಗುವುದು ಎಂದು ಫೆರ್ನಾಂಡೊ ತಿಳಿಸಿದರು.

ಶ್ರೀಲಂಕಾ 2017ರ ಅಕ್ಟೋಬರ್‌ನಲ್ಲಿ ಪಾಕ್‌ನಲ್ಲಿ ಟ್ವೆಂಟಿ-20 ಪಂದ್ಯವನ್ನು ಆಡಿತ್ತು. 2009ರಲ್ಲಿ ಲಾಹೋರ್‌ನಲ್ಲಿ ಲಂಕಾದ ಟೀಮ್ ಬಸ್ ಮೇಲೆ ಉಗ್ರರ ದಾಳಿ ನಡೆದ ಬಳಿಕ ಮೊದಲ ಬಾರಿ ಲಂಕಾ ತಂಡ ಪಾಕ್‌ಗೆ ತೆರಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News