ಹಮಾಸ್ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನಿಂದ ಬಾಂಬ್ ದಾಳಿ

Update: 2019-08-22 18:59 GMT

ಗಾಝಾ ಸಿಟಿ (ಫೆಲೆಸ್ತೀನ್), ಆ. 22: ಫೆಲೆಸ್ತೀನ್‌ನ ರಾಕೆಟ್ ದಾಳಿಗಳಿಗೆ ಪ್ರತಿಯಾಗಿ ಬುಧವಾರ ರಾತ್ರಿ ಇಸ್ರೇಲ್ ಪಡೆಗಳು ಗಾಝಾ ಪಟ್ಟಿಯಲ್ಲಿನ ಹಮಾಸ್ ನೆಲೆಗಳ ಮೇಲೆ ದಾಳಿ ನಡೆಸಿದವು ಎಂದು ಇಸ್ರೇಲ್ ಸೇನೆ ಗುರುವಾರ ಹೇಳಿದೆ.

ಹಮಾಸ್ ಬುಧವಾರ ರಾತ್ರಿ ಇಸ್ರೇಲ್‌ನತ್ತ ಎರಡು ರಾಕೆಟ್‌ಗಳನ್ನು ಹಾರಿಸಿತು ಎಂದು ಅದು ಹೇಳಿದೆ. ಇದರೊಂದಿಗೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಗಾಝಾದಿಂದ ಹಾರಿಸಲಾದ ರಾಕೆಟ್‌ಗಳ ಸಂಖ್ಯೆ 6ಕ್ಕೇರಿದೆ ಎಂದಿದೆ. ಇದಕ್ಕೆ ಪ್ರತಿಯಾಗಿ, ಉತ್ತರ ಗಾಝಾ ಪಟ್ಟಿಯಲ್ಲಿನ ಹಮಾಸ್ ನೌಕಾ ನೆಲೆಯಲ್ಲಿರುವ ಹಲವಾರು ಗುರಿಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿತು ಎಂದು ಅದು ತಿಳಿಸಿದೆ.

ಗಾಝಾ ನಗರದ ಪಶ್ಚಿಮದಲ್ಲಿರುವ ನೌಕಾ ನೆಲೆಯೊಂದರ ಮೇಲೆ ಇಸ್ರೇಲ್‌ನ ವಿಮಾನಗಳು ಹಲವು ಬಾರಿ ದಾಳಿ ನಡೆಸಿದವು ಎಂದು ಫೆಲೆಸ್ತೀನ್ ಭದ್ರತಾ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದೆ.

ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News