ಕಾಶ್ಮೀರ ಸಮಸ್ಯೆ: ಜಿ-7 ಶೃಂಗದಲ್ಲಿ ಮೋದಿ- ಟ್ರಂಪ್ ಚರ್ಚೆ

Update: 2019-08-23 15:10 GMT
ಫೈಲ್ ಚಿತ್ರ

ಜಿ-7 ಶೃಂಗದಲ್ಲಿ ಮೋದಿ ಜೊತೆ ಟ್ರಂಪ್ ‘ಕಾಶ್ಮೀರ’ ಮಾತುಕತೆ

ಅಮೆರಿಕ ಘೋಷಣೆ

ವಾಶಿಂಗ್ಟನ್, ಆ. 23: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ನಿರ್ಧಾರವು ಆ ದೇಶದ ಆಂತರಿಕ ವಿಷಯವಾಗಿದೆ, ಆದರೆ ಅದು ಪ್ರಾದೇಶಿಕ ಪರಿಣಾಮಗಳನ್ನು ಹೊಂದಿದೆ ಎಂದು ಅಮೆರಿಕ ಗುರುವಾರ ಹೇಳಿದೆ. ಮುಂಬರುವ ಜಿ-7 ಶೃಂಗ ಸಭೆಯ ನೇಪಥ್ಯದಲ್ಲಿ ಭೇಟಿಯಾಗುವಾಗ, ಪ್ರಾದೇಶಿಕ ಉದ್ವಿಗ್ನತೆಯನ್ನು ತಗ್ಗಿಸಲು ಹಾಗೂ ರಾಜ್ಯದಲ್ಲಿ ಮಾನವಹಕ್ಕುಗಳನ್ನು ಎತ್ತಿಹಿಡಿಯಲು ಪ್ರಧಾನಿ ನರೇಂದ್ರ ಮೋದಿ ಏನು ಮಾಡಲು ಉದ್ದೇಶಿಸಿದ್ದಾರೆ ಎಂಬುದನ್ನು ಆಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂರು ದಿನಗಳ ಶೃಂಗಸಭೆಯು ಫ್ರಾನ್ಸ್‌ನ ಬಿಯರಿಟ್ಝ್ ನಗರದಲ್ಲಿ ಶನಿವಾರ ಆರಂಭಗೊಳ್ಳಲಿದೆ.

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವ ಟ್ರಂಪ್‌ರ ಕೊಡುಗೆಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ತಿಳಿಯಾಗಿಸುವ ಪ್ರಯತ್ನ ಮಾಡಿದ ಅವರು, ಉಭಯ ಬಣಗಳು ಬಯಸಿದರೆ ಮಾತ್ರ ಉದ್ವಿಗ್ನತೆಯನ್ನು ತಣಿಸುವಲ್ಲಿ ನೆರವು ನೀಡಲು ಅಮೆರಿಕ ಸಿದ್ಧವಾಗಿದೆ ಎಂದರು. ಅದೇ ವೇಳೆ, ಟ್ರಂಪ್ ಸೂಚಿಸಿರುವಂತೆ, ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಕೋರಿಕೆ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

 ಗಡಿ ನಿಯಂತ್ರಣ ರೇಖೆಯಲ್ಲಿ ಗಡಿಯಾಚೆಯಿಂದ ಭಯೋತ್ಪಾದಕರು ಭಾರತಕ್ಕೆ ನುಸುಳುವುದನ್ನು ತಡೆಯಬೇಕು ಹಾಗೂ ಪಾಕಿಸ್ತಾನದ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳನ್ನು ಮಟ್ಟಹಾಕಬೇಕು ಎಂಬುದಾಗಿಯೂ ಅಮೆರಿಕ ಅಧ್ಯಕ್ಷರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News