22 ವರ್ಷ ಕಳೆದರೂ ಕೊಳೆಯದ ಶವ !

Update: 2019-08-23 06:27 GMT
ಸಾಂದರ್ಭಿಕ ಚಿತ್ರ

ಬಂದಾ (ಉತ್ತರ ಪ್ರದೇಶ): ಇಲ್ಲಿನ ಬರೇರು ಪ್ರದೇಶದಲ್ಲಿ ಅತ್ತಾರಾ ರಸ್ತೆಬದಿಯ ಸ್ಮಶಾನವೊಂದರಿಂದ 22 ವರ್ಷಗಳ ಬಳಿಕ ಹೊರತೆಗೆದ ಶವ ಸ್ವಲ್ಪವೂ ಕೊಳೆತುಹೋಗದೇ, ಶವಕ್ಕೆ ಹೊದಿಸಿದ್ದ ಬಟ್ಟೆ ಕೂಡಾ ಅಚ್ಚ ಬಿಳಿ ಬಣ್ಣದಿಂದ ಉಳಿದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರು ಇದನ್ನು ಪವಾಡ ಎಂದು ಬಣ್ಣಿಸಿದ್ದಾರೆ. ಮೃತ ನಾಸೀರ್ ಅಹ್ಮದ್ ಬಹಳ ಸಜ್ಜನ ವ್ಯಕ್ತಿ, ಅವರಿಗೆ ಅಲ್ಲಾಹನ ಆಶೀರ್ವಾದ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಬರೇರು ಸ್ಮಶಾನದಲ್ಲಿ ಸಮಾದಿಯೊಂದು ಮುಳುಗಿದ್ದು, ಆ ವೇಳೆ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸ್ಮಶಾನ ಸಮಿತಿ ಸದಸ್ಯರಿಗೆ ಈ ಸಂಬಂಧ ಮಾಹಿತಿ ನೀಡಿದಾಗ, ಮಣ್ಣನ್ನು ಸ್ವಚ್ಛಗೊಳಿಸಿದರು. ಆ ವೇಳೆ, ಬಿಳಿವಸ್ತ್ರದಲ್ಲಿ ಸುತ್ತಿದ್ದ ಶವ ಪತ್ತೆಯಾಗಿದೆ. ಶವ ಹೊರತೆಗೆದಾಗ ಈ ಕೌತುಕ ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು.

22 ವರ್ಷ ಹಿಂದೆ ಮೃತಪಟ್ಟ ನಾಸೀರ್ ಅಹ್ಮದ್ ಅವರ ಶವ ಇದು ಎಂದು ಪತ್ತೆ ಮಾಡಲಾಗಿದೆ. ಅವರ ಸಂಬಂಧಿಕರೊಬ್ಬರು ಶವ ಪತ್ತೆ ಮಾಡಿದ್ದು, 22 ವರ್ಷ ಹಿಂದೆ ಶವ ಹೂಳುವ ಸಂದರ್ಭದಲ್ಲಿ ತಾನು ಅದನ್ನು ನೋಡಿದ್ದಾಗಿ ಹೇಳಿದ್ದಾರೆ. ಬುಧವಾರ ರಾತ್ರಿ ಅಲ್ಲೇ ಪಕ್ಕದಲ್ಲಿ ಶವವನ್ನು ಮತ್ತೆ ಹೂಳಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News