ವಿಟಿಯು ಉಪಕುಲಪತಿ ಅವಧಿ ವಿಸ್ತರಣೆಗೆ ಎಬಿವಿಪಿ ವಿರೋಧ

Update: 2019-08-24 12:16 GMT

ಬೆಂಗಳೂರು, ಆ.24: ವಿಟಿಯು ಉಪಕುಲಪತಿ ಡಾ.ಕರಿಸಿದ್ಧಪ್ಪ ವಿರುದ್ಧ ಹಲವು ಆರೋಪಗಳಿವೆ. ಆದರೂ, ಅವರನ್ನು ಮತ್ತೊಂದು ಅವಧಿಗೆ(3ವರ್ಷ) ಉಪಕುಲಪತಿಯಾಗಿ ನೇಮಿಸಿರುವುದು ಖಂಡನೀಯವೆಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ವೌಲ್ಯಮಾಪನದಲ್ಲಿ ಲೋಪ, ಫಲಿತಾಂಶ ವಿಳಂಬ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಕೂಡಿದೆ. ಇದ್ಯಾವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಉಪಕುಲಪತಿ ವಿಫಲರಾಗಿದ್ದಾರೆ. ಉಪಕುಲಪತಿಗಳ ಅವಧಿ ಮುಗಿದಾಗ ಮೊತ್ತೊಬ್ಬರನ್ನು ನೇಮಿಸುವುದಕ್ಕೆ ವಿಳಂಬವಾದಾಗ 3ರಿಂದ 6ತಿಂಗಳ ಕಾಲಾವಧಿಗೆ ಇನ್‌ಚಾರ್ಜ್ ಕುಲಪತಿಯಾಗಿ ನೇಮಿಸುವುದು ವಾಡಿಕೆ. ಆದರೆ, ಅನೇಕ ಅಪಾದನೆಗಳನ್ನು ಎದುರಿಸುತ್ತಿರುವ ಡಾ.ಕರಿಸಿದ್ದಪ್ಪರನ್ನು ಮತ್ತೊಂದು ಅವಧಿಗೆ ಉಪಕುಲಪತಿಗಳಾಗಿ ನೇಮಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News