ಅಪಾಯಕಾರಿ ರೇಡಿಯೊ ಫ್ರೀಕ್ವೆನ್ಸಿ ಹೊರಸೂಸುವಿಕೆ: ಈ ಪ್ರಸಿದ್ಧ ಮೊಬೈಲ್ ಕಂಪೆನಿಗಳ ವಿರುದ್ಧ ದೂರು

Update: 2019-08-25 15:30 GMT

ಸ್ಯಾನ್‌ಫ್ರಾನ್ಸಿಸ್ಕೊ,ಆ.25: ಸ್ಮಾರ್ಟ್‌ಫೋನ್‌ಗಳಿಂದ ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ರೇಡಿಯೊ ಫ್ರೀಕ್ವೆನ್ಸಿ (ಆರ್‌ಎಫ್) ವಿಕಿರಣ ಹೊರಸೂಸುತ್ತಿರುವ ಆರೋಪದಲ್ಲಿ ಮೊಬೈಲ್ ಫೋನ್ ತಯಾರಿಕ ಕಂಪೆನಿಗಳಾದ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡಲಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯದ ಉತ್ತರ ಜಿಲ್ಲೆಯ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಸಾಮೂಹಿಕ ದಾವೆಯಲ್ಲಿ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಹೊರಸೂಸುವ ಆರ್‌ಎಫ್ ಪ್ರಮಾಣ ಸಂಯುಕ್ತ ಸಂವಹನ ಆಯೋಗ (ಎಫ್‌ಸಿಸಿ) ನಿಗದಿಪಡಿಸಿರುವ ಮಿತಿಗಿಂತ ಅಧಿಕವಾಗಿದೆ ಎಂದು ಆರೋಪಿಸಲಾಗಿದೆ. ಈ ದಾವೆಯಲ್ಲಿ ಆ್ಯಪಲ್ ಐಫೋನ್7 ಪ್ಲಸ್, ಐಫೋನ್8 ಮತ್ತು ಐಫೋನ್ ಎಕ್ಸ್ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 ಮತ್ತು ಗ್ಯಾಲಕ್ಸಿ ನೋಟ್8ಗಳನ್ನು ಉಲ್ಲೇಖಿಸಲಾಗಿದೆ.

ಐಫೋನ್ 7ರಿಂದ ಹೊರಸೂಸುವ ಆರ್‌ಎಫ್ ವಿಕಿರಣ ನಿಗದಿತ ಸುರಕ್ಷತಾ ಮಿತಿಗಿಂತ ಹೆಚ್ಚಾಗಿದೆ ಮತ್ತು ಆ್ಯಪಲ್‌ಕಂಪೆನಿ ಸಂಯುಕ್ತ ನಿಯಂತ್ರಕರಿಗೆ ಸಲ್ಲಿಸಿರುವ ತಾನೇ ನಡೆಸಿರುವ ಪರೀಕ್ಷೆಯ ವರದಿಯಲ್ಲಿ ತಿಳಿಸಿರವ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ ಎನ್ನುವುದು ಚಿಕಾಗೊ ಟ್ರಿಬ್ಯೂನ್ ನಡೆಸಿದ ಪ್ರತ್ಯೇಕ ತನಿಖೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News