ಪ್ರೊ ಕಬಡ್ಡಿ ಲೀಗ್: ಜೈಪುರಕ್ಕೆ ತಿವಿದ ಬೆಂಗಳೂರು ಬುಲ್ಸ್

Update: 2019-08-26 13:47 GMT

ಹೊಸದಿಲ್ಲಿ, ಆ.25: ಉತ್ತಮ ಪ್ರದರ್ಶನದಿಂದ ಮೆರೆಯುತ್ತಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 41-30 ಅಂಕಗಳ ಅಂತರದಿಂದ ಮಣಿಸಿದ ಬೆಂಗಳೂರು ಬುಲ್ಸ್ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇಲ್ಲಿನ ತ್ಯಾಗರಾಜ ಸ್ಟೇಡಿಯಂನಲ್ಲಿ ರವಿವಾರ ನಡೆದ ಲೀಗ್‌ನ 58ನೇ ಪಂದ್ಯದಲ್ಲಿ ವಿಜೇತ ಬೆಂಗಳೂರಿನ ಪರ ಕುಮಾರ್ ದ್ವಯರಾದ ರೋಹಿತ್(13) ಹಾಗೂ ಪವನ್(8)21 ಅಂಕ ಗಳಿಸಿದರು. ಮಣಿಂದರ್ 6 ಅಂಕದ ಕೊಡುಗೆ ನೀಡಿದರು.

ಪರಾಜಿತ ಜೈಪುರ ಪರ ನಿತಿನ್ ರಾವಲ್ 8 ಹಾಗೂ ಅಜಿಂಕ್ಯ ಪವಾರ್ 5 ಅಂಕ ಗಳಿಸಿದರು.

ಜೈಪುರ ತಾನಾಡಿದ 11ನೇ ಪಂದ್ಯದಲ್ಲಿ 4ನೇ ಸೋಲು ಕಂಡಿತು. ಒಟ್ಟು 37 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಬೆಂಗಳೂರು ತಾನಾಡಿದ 11ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿ 33 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News