ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

Update: 2019-08-27 18:37 GMT

ಮಾನ್ಯರೇ,

ಸರಕಾರ ಬಡವರಿಗೆ ಆಶ್ರಯ ಮನೆಯನ್ನು ಪ್ರತೀ ಸಲ ಗ್ರಾಮ ಪಂಚಾಯತ್‌ಗಳ ಮೂಲಕ ಜನರಿಗೆ ನೀಡುತ್ತಾ ಬರುತ್ತಿದೆ. ಆದರೆ ಈ ಮನೆಗಳನ್ನು ಬಡವರು ನೇರವಾಗಿ ಪಡೆಯಲು ಸಾಧ್ಯವಿಲ್ಲ.

ಈ ಮನೆಗಳನ್ನು ದೊರಕಿಸಿಕೊಳ್ಳಬೇಕಾದರೆ ಗ್ರಾಮ ಪಂಚಾಯತ್‌ಗಳ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರೆಲ್ಲರಿಗೆ ಸೇರಿ ಹಲವು ಸಾವಿರ ರೂ.ಗಳನ್ನು ಲಂಚದ ರೂಪದಲ್ಲಿ ಕೊಡಬೇಕಾಗುತ್ತದೆ. ಇವರು ಒಂದೊಂದು ಮನೆಗೆ 20ರಿಂದ 25 ಸಾವಿರ ರೂ. ವರೆಗೆ ಬೇಡಿಕೆ ಇಡುತ್ತಾರೆ. ಈ ಶರತ್ತು ಒಪ್ಪಿಕೂಂಡವರಿಗೆ ಮಾತ್ರ ಮನೆ ಸಿಗಬಹುದು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ನೈಜ ಫಲಾನುಭವಿಗಳಿಗೆ ಆಶ್ರಯ ಯೋಜನೆಯ ಫಲ ದೊರಕಿಸಿಕೊಡಬೇಕಾಗಿದೆ.

ಗುಂಡು ಎಸ್., ಅತಿವಾಳ

Writer - ಗುಂಡು ಎಸ್., ಅತಿವಾಳ

contributor

Editor - ಗುಂಡು ಎಸ್., ಅತಿವಾಳ

contributor

Similar News