×
Ad

ವಿಮಾನದಲ್ಲಿ ಧೂಮಪಾನ; ಯುವಕ ಸೆರೆ

Update: 2019-09-01 17:01 IST

ಬೆಂಗಳೂರು, ಸೆ.1:ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪದಡಿ ವ್ಯಕ್ತಿಯೊರ್ವನನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯ ಸಂತೋಷ್ ಕುಮಾರ್ (29) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಬಂಧಿತ ಸಂತೋಷ್‌ ಕುಮಾರ್, ಶನಿವಾರ ರಾತ್ರಿ ಪಶ್ಚಿಮಬಂಗಾಳದ ಬಾಗ್‌ದೋರ ವಿಮಾನ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಶೌಚಾಲಯಕ್ಕೆ ಹೋಗಿ ಸಿಗರೇಟ್ ಸೇದಿದ್ದಾನೆ. ಈ ವೇಳೆ, ದಿಢೀರ್ ಶಬ್ದವಾಗಿದೆ. ಬಳಿಕ, ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಸಿಗರೇಟ್, ಬೆಂಕಿ ಹಚ್ಚುವ ಆಯುಧ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತು ಸಿಬ್ಬಂದಿ ದೂರು ನೀಡಿರುವ ಹಿನ್ನಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದು, ಕಾನೂನು ಕ್ರಮ ಜರುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News