ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್: ಭಾರತಕ್ಕೆ 257 ರನ್ ಗಳ ಭರ್ಜರಿ ಜಯ

Update: 2019-09-02 19:04 GMT

ಜಮೈಕಾ, ಸೆ.2: ಆತಿಥೇಯ ವಿಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ 257 ರನ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ.

ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 468 ರನ್ ಗುರಿ ಪಡೆದ ವಿಂಡೀಸ್ ತಂಡ 210 ರನ್ ಗಳಿಸಿ ಆಲೌಟಾಯಿತು. ವಿಂಡೀಸ್ ಪರ ಬ್ರೂಕ್ಸ್ 50 ರನ್ ಗಳಿಸಿದರೆ, ಬ್ಲಾಕ್ ಹುಡ್ (38) ಹಾಗೂ ಹೋಲ್ಡರ್ (39) ರನ್ ಗಳಿಸಿದರು. ಭಾರತದ ಪರ ಮುಹಮ್ಮದ್ ಶಮಿ ಹಾಗೂ ಜಡೇಜಾ ತಲಾ ಮೂರು ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಹನುಮ ವಿಹಾರಿ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ 416 ಗಳಿಸಿದ ಭಾರತ, ಆ ಬಳಿಕ ಜಸ್‌ಪ್ರೀತ್ ಬುಮ್ರಾ ಪಡೆದ ಹ್ಯಾಟ್ರಿಕ್ ವಿಕೆಟ್ ಬಲದಿಂದ ಆತಿಥೇಯ ವಿಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 299 ರನ್ ಗಳ ಹಿನ್ನಡೆಯಿಂದ ವಿಂಡೀಸ್ ತಂಡ ಫಾಲೋ-ಅನ್ ಭೀತಿಗೆ ಒಳಗಾಗಿದ್ದರೂ ಕೂಡಾ ಪ್ರವಾಸಿ ತಂಡದ ನಾಯಕ ಕೊಹ್ಲಿ ವಿಂಡೀಸ್ ಅನ್ನು ಬ್ಯಾಟಿಂಗ್ ಗೆ ಅಹ್ವಾನಿಸಲಿಲ್ಲ. ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ 168/4 ಗಳಿಸಿ ಡಿಕ್ಲೇರ್ ಮಾಡಿದ ಭಾರತ ತಂಡವು ವಿಂಡೀಸ್ ಗೆ 468 ರನ್ ಗುರಿ ನೀಡಿತ್ತು. ಆದರೆ ವಿಂಡೀಸ್ ತಂಡ 210 ರನ್ ಗಳಿಸಿ ಆಲೌಟಾಗಿ ಸೋಲೊಪ್ಪಿಕೊಂಡಿತು.  

ಹನುಮ ವಿಹಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲ ಇನ್ನಿಂಗ್ಸ್: ಭಾರತ- 416, ವಿಂಡೀಸ್ - 117

ದ್ವಿತೀಯ ಇನ್ನಿಂಗ್ಸ್- ಭಾರತ 168/4, ವಿಂಡೀಸ್ 210

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News